OpenAI

ಮಹತ್ವಾಕಾಂಕ್ಷಿ ಆಲೋಚನೆಗಳನ್ನು ಹೊಂದಿರುವವರ ಹೆಮ್ಮೆಯ ಪಾಲುದಾರ

ತಮ್ಮ ಸಮುದಾಯಗಳನ್ನು ರಕ್ಷಿಸುತ್ತಿರುವ, ಹೊಸ ಆವಿಷ್ಕಾರಗಳತ್ತ ಸಾಗುತ್ತಿರುವ ಮತ್ತು ಬಾಹ್ಯಾಕಾಶದಲ್ಲಿ ನೆರವಾಗಲು ರೋಬೋಟ್‌ಗಳನ್ನು ನಿರ್ಮಿಸುತ್ತಿರುವ ಜನರನ್ನು ಪರಿಚಯಿಸಿಕೊಳ್ಳಿ. OpenAI ಟೂಲ್‌ಗಳು, ಹಣಕಾಸಿನ ನೆರವು ಮತ್ತು ನಮ್ಮ ಅತ್ಯಾಧುನಿಕ ಮಾಡೆಲ್‌ಗಳನ್ನು ಬಳಸುವ ಅವಕಾಶದ ಮೂಲಕ ಅವರ ಕೆಲಸವನ್ನು ಬೆಂಬಲಿಸುತ್ತದೆ.

ರಯನ್ ಮತ್ತು ChatGPT Pro ಲೈವ್ ಸೆನ್ಸರ್ ಡೇಟಾವನ್ನು ಕಾಡ್ಗಿಚ್ಚಿನ ಕುರಿತು ನೈಜ-ಸಮಯದ ಎಚ್ಚರಿಕೆಗಳಾಗಿ ಪರಿವರ್ತಿಸುತ್ತಿದ್ದಾರೆ

ರಯನ್ ಹೊನರಿ + ಲಗುನಾ ಬೀಚ್ ಅಗ್ನಿಶಾಮಕ ಇಲಾಖೆ

ಅಗ್ನಿಶಾಮಕ ಸಿಬ್ಬಂದಿ ವೇಗವಾಗಿ ಸ್ಪಂದಿಸಲು ಮತ್ತು ಜನರನ್ನು ಬೇಗನೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ನೆರವಾಗುವಂತೆ, ರಯನ್ ಹೊನರಿ ಕಾಡ್ಗಿಚ್ಚನ್ನು ಅತ್ಯಂತ ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಲಗುನಾ ಬೀಚ್‌ನಂತಹ ಅಗ್ನಿಶಾಮಕ ಇಲಾಖೆಗಳು ಈಗಾಗಲೇ ಕಾಡ್ಗಿಚ್ಚು ನಿರ್ವಹಣಾ ಯೋಜನೆಗಳಲ್ಲಿ ಅವರ ತಂತ್ರಜ್ಞಾನವನ್ನು ಬಳಸುತ್ತಿವೆ.

ರಯನ್ ಅವರ ಕಾಡ್ಗಿಚ್ಚು ಪತ್ತೆಹಚ್ಚುವ ಸೆನ್ಸರ್ ನೆಟ್‌ವರ್ಕ್‌ಗೆ ಬೆಂಬಲವಾಗಿ OpenAI ಉಚಿತವಾಗಿ ChatGPT Pro⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಒದಗಿಸುತ್ತಿದೆ. ಬೆಂಕಿಯ ಕುರಿತ ಲೈವ್‌ ಡೇಟಾವನ್ನು ಅಗ್ನಿಶಾಮಕ ಸಿಬ್ಬಂದಿಗೆ ಸ್ಪಷ್ಟವಾದ, ತಕ್ಷಣ ಕ್ರಮ ಕೈಗೊಳ್ಳಲು ನೆರವಾಗುವ ಎಚ್ಚರಿಕೆಗಳಾಗಿ ಪರಿವರ್ತಿಸುವ ಟೂಲ್‌ಗಳನ್ನು ನಿರ್ಮಿಸಲು ಅವರು ChatGPT Pro ಬಳಸುತ್ತಿದ್ದಾರೆ. ಸಂಭಾವ್ಯ ಕಾಡ್ಗಿಚ್ಚುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಕೆಲವೇ ಸೆಕೆಂಡುಗಳಲ್ಲಿ ಉತ್ತರ ಪಡೆಯಲು ಅನುವು ಮಾಡುವ ವಾಕಿ-ಟಾಕಿ ವೈಶಿಷ್ಟ್ಯವೂ ಇವುಗಳಲ್ಲಿ ಸೇರಿದೆ.

ಸಮುದಾಯಗಳನ್ನು ಸುರಕ್ಷಿತವಾಗಿಡುವ ಈ ಪ್ರಯತ್ನದಲ್ಲಿ OpenAI ಹೆಮ್ಮೆಯ ಪಾಲುದಾರ.

ಅಗ್ನಿಶಾಮಕ ವಾಹನದ ಬಳಿ ಸೆನ್ಸರ್ ಉಪಕರಣಗಳನ್ನು ಹೊತ್ತೊಯ್ಯುತ್ತಿರುವ ರಯನ್
“ChatGPT ನೆರವಿನಿಂದ, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಅವಘಡದ ಸ್ಥಳಕ್ಕೆ ಹೆಚ್ಚು ವೇಗವಾಗಿ ತಲುಪುವಂತೆ ಮತ್ತು ಜನರನ್ನು ಇನ್ನಷ್ಟು ಬೇಗ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವ ನಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತಿದೆ.”

ಈಥನ್, ಜೇಮಿ ಮತ್ತು GPT‑6 Astra ಬಾಹ್ಯಾಕಾಶದಲ್ಲಿನ ದೈನಂದಿನ ಕೆಲಸಗಳನ್ನು ನಿರ್ವಹಿಸಲು ರೋಬೋಟ್‌ಗಳನ್ನು ನಿರ್ಮಿಸುತ್ತಿದ್ದಾರೆ

ತಮ್ಮ ರೋಬೋಟ್ ಜೊತೆ ಛಾಯಾಚಿತ್ರಕ್ಕೆ ಪೋಸ್ ನೀಡುತ್ತಿರುವ ಈಥನ್ ಮತ್ತು ಜೇಮಿ

ಈಥನ್ ಬರಾಹಾಸ್, ಜೇಮಿ ಪಾಮರ್ + ಇಕರಸ್ ರೋಬೋಟಿಕ್ಸ್

ಬಾಹ್ಯಾಕಾಶದಲ್ಲಿ ದೈನಂದಿನ ಕೆಲಸಗಳನ್ನು ನಿರ್ವಹಿಸಬಲ್ಲ ರೋಬೋಟ್‌ಗಳನ್ನು ನಿರ್ಮಿಸಲು ಈಥನ್ ಮತ್ತು ಜೇಮಿ ಇಕರಸ್ ರೋಬೋಟಿಕ್ಸ್ ಅನ್ನು ಸ್ಥಾಪಿಸಿದರು. ಇದರಿಂದ ಗಗನಯಾತ್ರಿಗಳಿಗೆ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಹೆಚ್ಚಿನ ಸಮಯ ಸಿಗುತ್ತದೆ. ತಮ್ಮ ರೋಬೋಟ್‌ಗಳಿಗಾಗಿ ಕೋಡ್ ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಅವರು GPT‑6 Astra ನೆರವು ಪಡೆಯುತ್ತಿದ್ದಾರೆ.

ಯುವ ನಿರ್ಮಾತೃಗಳಿಗೆ ಹಣಕಾಸಿನ ನೆರವು ಮತ್ತು ಸುಧಾರಿತ AI ಟೂಲ್‌ಗಳನ್ನು ಬಳಸುವ ಅವಕಾಶ ನೀಡುವ ChatGPT Futures⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಪ್ರೋಗ್ರಾಂ ಮೂಲಕ OpenAI ಈಥನ್ ಮತ್ತು ಜೇಮಿಯ ತಂಡಕ್ಕೆ ಅನುದಾನವನ್ನೂ ನೀಡಿದೆ.

ಗಗನಯಾತ್ರಿಗಳಿಗೆ ನೆರವಾಗುವ ಈ ಪ್ರಯತ್ನದಲ್ಲಿ OpenAI ಹೆಮ್ಮೆಯ ಪಾಲುದಾರ.

“ನಾವು ChatGPT Futures‌ನ 2026ರ ತಂಡದ ಭಾಗವಾಗಿದ್ದೆವು. ನಮಗೆ ದೊರೆತ ಮನ್ನಣೆ ಮತ್ತು ಬೆಂಬಲವು ಈ ರೋಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಅಗತ್ಯವಾದ ನೆರವನ್ನು ಪಡೆಯುವಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದೆ.”

ಡಾ. ಸೇಸರ್ ಡೆ ಲಾ ಫುವೆಂಟೆ ಮತ್ತು GPT‑6 Rosalind ಹೊಸ ಪ್ರತಿಜೀವಕಗಳ ಹುಡುಕಾಟವನ್ನು ಚುರುಕುಗೊಳಿಸುತ್ತಿದ್ದಾರೆ

ಡಾ. ಸೇಸರ್ ಡೆ ಲಾ ಫುವೆಂಟೆ + ಅವರ ಸಂಶೋಧನಾ ತಂಡ

ಬ್ಯಾಕ್ಟೀರಿಯಾಗಳು ಈಗಿರುವ ಚಿಕಿತ್ಸೆಗಳಿಗೆ ಪ್ರತಿರೋಧ ಬೆಳೆಸಿಕೊಳ್ಳುತ್ತಿರುವುದರಿಂದ, ಡಾ. ಸೇಸರ್ ಡೆ ಲಾ ಫುವೆಂಟೆ ಮತ್ತು ಅವರ ತಂಡ ಹೊಸ ಪ್ರತಿಜೀವಕಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಭರವಸೆ ಮೂಡಿಸುವ ಅಣುಗಳನ್ನು ಜೀವ ಉಳಿಸಬಲ್ಲ ಔಷಧಗಳಾಗಿ ರೂಪಿಸುವುದು ಅವರ ಮಹತ್ವಾಕಾಂಕ್ಷೆ.

ಜೀವ ವಿಜ್ಞಾನಗಳಿಗಾಗಿ ರೂಪಿಸಲಾದ GPT‑6 Rosalind⁠ ಮಾಡೆಲ್ ಅನ್ನು ಉಚಿತವಾಗಿ ಮತ್ತು ಮುಂಚಿತವಾಗಿ ಬಳಸುವ ಅವಕಾಶ ನೀಡಿ OpenAI ಅವರ ಸಂಶೋಧನೆಯನ್ನು ಬೆಂಬಲಿಸುತ್ತದೆ. ಜೈವಿಕ ಡೇಟಾವನ್ನು ಅರ್ಥೈಸಲು ಮತ್ತು ಇನ್ನಷ್ಟು ಆಳವಾಗಿ ಅಧ್ಯಯನ ಮಾಡಬೇಕಾದ ಅಣುಗಳನ್ನು ಗುರುತಿಸಲು ಇದು ತಂಡಕ್ಕೆ ನೆರವಾಗುತ್ತದೆ. ಹೀಗಾಗಿ ಭರವಸೆ ಮೂಡಿಸುವ ಅಣುಗಳನ್ನು ಬೇಗನೆ ಪ್ರಯೋಗಾಲಯದಲ್ಲಿ ಪರೀಕ್ಷಿಸಬಹುದು.

ಮಾರಣಾಂತಿಕ ಸೋಂಕುಗಳು ಕಡಿಮೆ ಇರುವ ಭವಿಷ್ಯವನ್ನು ರೂಪಿಸುವಲ್ಲಿ OpenAI ಹೆಮ್ಮೆಯ ಪಾಲುದಾರ.

ಪ್ರಯೋಗಾಲಯದಲ್ಲಿ ಸೇಸರ್ ಮತ್ತು ಅವರ ಸಂಶೋಧನಾ ತಂಡ
“ನನ್ನ ಪ್ರಯೋಗಾಲಯದಲ್ಲಿ, GPT-6 Rosalind ಸೇರಿದಂತೆ OpenAI ಟೂಲ್‌ಗಳು ಪ್ರತಿದಿನವೂ ಆವಿಷ್ಕಾರಗಳ ವೇಗ ಹೆಚ್ಚಿಸಲು ನೆರವಾಗುತ್ತಿವೆ.”