OpenAI
Drag left or right, or use the arrow keys, to rotate the sphere of scientific objects. Press Space to pause or resume.

ನವೆಂಬರ್ 16, 2026

ಸಂಶೋಧನೆವಿಜ್ಞಾನ

ವಿಜ್ಞಾನದ ಮುಂಚೂಣಿಯಲ್ಲಿ

1,800ಕ್ಕೂ ಹೆಚ್ಚು ವಿಜ್ಞಾನಿಗಳು ChatGPT ಹೇಗೆ ಬಳಸಿದರು ಮತ್ತು ವೈಜ್ಞಾನಿಕ ಆವಿಷ್ಕಾರದಲ್ಲಿ AI ಪಾತ್ರದ ಬಗ್ಗೆ ಅವರ ನಿರೀಕ್ಷೆಗಳೇನು ಎಂಬುದನ್ನು ತಿಳಿಯಿರಿ. ನಮ್ಮ ಹೊಸ ವರದಿಯ ಫಲಿತಾಂಶಗಳನ್ನು ಅನ್ವೇಷಿಸಿ.

ಸಂಶೋಧಕರು ಹೊಸ ಪ್ರಶ್ನೆಗಳನ್ನು ಕೇಳಿ, ಅವುಗಳಿಗೆ ಉತ್ತರಿಸುವ ಮಾರ್ಗಗಳನ್ನು ಕಂಡುಕೊಳ್ಳುವುದರ ಮೇಲೆ ವೈಜ್ಞಾನಿಕ ಪ್ರಗತಿ ಅವಲಂಬಿತವಾಗಿದೆ. AI ಈ ಕೆಲಸದ ಭಾಗವಾಗುತ್ತಿದೆ. ಆದರೆ ಅದು ಎಲ್ಲಿ ನೆರವಾಗುತ್ತದೆ ಮತ್ತು ಆವಿಷ್ಕಾರಕ್ಕೆ ಯಾವ ಕೊಡುಗೆ ನೀಡಬಹುದು ಎಂಬುದನ್ನು ನಾವು ಇನ್ನೂ ಅರಿತುಕೊಳ್ಳುತ್ತಿದ್ದೇವೆ.

ಶೈಕ್ಷಣಿಕ ಸಂಶೋಧಕರಿಗಾಗಿ ಇರುವ ChatGPT ಯೋಜನೆಯ ಬೇಸಿಗೆಯ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ 1,819 ವಿಜ್ಞಾನಿಗಳ 580,000ಕ್ಕೂ ಹೆಚ್ಚು ವೈಜ್ಞಾನಿಕ ಸಂದೇಶಗಳನ್ನು OpenAIನ ಆರ್ಥಿಕ ಸಂಶೋಧನಾ ತಂಡ ಅಧ್ಯಯನ ಮಾಡಿತು ಮತ್ತು 251 ಭಾಗವಹಿಸುವವರನ್ನು ಸಮೀಕ್ಷೆ ಮಾಡಿತು.

ಸಂಶೋಧನಾ ಸಾಹಿತ್ಯದ ವಿಮರ್ಶೆಯಿಂದ ಹಿಡಿದು ಪುರಾವೆಗಳ ವಿಶ್ಲೇಷಣೆ ಮತ್ತು ವಿಚಾರಗಳ ಅಭಿವೃದ್ಧಿಯವರೆಗೆ, ವಿಜ್ಞಾನಿಗಳು ಸಂಶೋಧನಾ ಪ್ರಕ್ರಿಯೆಯ ಉದ್ದಕ್ಕೂ ChatGPT ಬಳಸಿದರು. AI ಇಲ್ಲದೆ ಅದೇ ಕೆಲಸವನ್ನು ಅದೇ ಗುಣಮಟ್ಟದಲ್ಲಿ ಮಾಡಲು 1.9 ಪಟ್ಟು ಸಮಯ ಬೇಕಾಗುತ್ತಿತ್ತು ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರು ಅಂದಾಜಿಸಿದರು. ಆವಿಷ್ಕಾರಗಳಿಗೆ ಬೇಕಾಗುವ ಸಮಯದ ಕುರಿತ ನಮ್ಮ ಪ್ರಶ್ನೆಗೆ ಉತ್ತರಿಸಿದವರಲ್ಲಿ 98% ಜನರು AI ತಮ್ಮ ಕ್ಷೇತ್ರದಲ್ಲಿ ಆವಿಷ್ಕಾರಗಳನ್ನು ವೇಗಗೊಳಿಸುತ್ತದೆ ಎಂದು ನಿರೀಕ್ಷಿಸಿದರು.

ಶೈಕ್ಷಣಿಕ ಸಂಶೋಧಕರಿಗಾಗಿ ಇರುವ ChatGPT ಕಾರ್ಯಕ್ರಮದ ಭಾಗವಹಿಸುವವರ ದತ್ತಾಂಶವನ್ನು OpenAI ತನ್ನ ಮಾದರಿಗಳ ತರಬೇತಿಗೆ ಪೂರ್ವನಿಯೋಜಿತವಾಗಿ ಬಳಸುವುದಿಲ್ಲ. ಸಂಶೋಧಕರ ಗೌಪ್ಯತೆಯನ್ನು ಕಾಪಾಡಲು, ಸ್ವಯಂಚಾಲಿತ ವರ್ಗೀಕರಣ ಸಾಧನಗಳನ್ನು ಬಳಸಿ ಸಂದೇಶಗಳನ್ನು ಸಂಶೋಧನಾ ಸಾಹಿತ್ಯದ ವಿಮರ್ಶೆ, ಸಂಕೇತಸೂಚಿ ಬರವಣಿಗೆ ಅಥವಾ ದತ್ತಾಂಶ ವಿಶ್ಲೇಷಣೆಯಂತಹ ಸಂಶೋಧನಾ ಚಟುವಟಿಕೆಗಳ ಪ್ರಕಾರ ವಿಂಗಡಿಸಿದೆವು. ಸಂಶೋಧನಾ ತಂಡಕ್ಕೆ ಆ ವರ್ಗಗಳು ಗೋಚರಿಸುತ್ತಿದ್ದವು. ಆದರೆ ತಂಡವು ಮೂಲ ಸಂದೇಶಗಳನ್ನಾಗಲಿ ChatGPT ನೀಡಿದ ಉತ್ತರಗಳನ್ನಾಗಲಿ ಓದಲಿಲ್ಲ.

AI ವಿಜ್ಞಾನಿಗಳ ದೈನಂದಿನ ಕೆಲಸದ ಭಾಗವಾಗಿದೆ

ಸಂಶೋಧನಾ ಪ್ರಕ್ರಿಯೆಯ ಉದ್ದಕ್ಕೂ ವಿಜ್ಞಾನಿಗಳು ChatGPT ಹೇಗೆ ಬಳಸಿದರು ಎಂಬುದನ್ನು ನಾವು ಅಧ್ಯಯನ ಮಾಡಿದೆವು.

ಪ್ರತಿ ವಿಜ್ಞಾನಿಯ ವೈಜ್ಞಾನಿಕ ಸಂದೇಶಗಳಲ್ಲಿ ಪ್ರತಿ ಚಟುವಟಿಕೆಯ ಪಾಲನ್ನು ಲೆಕ್ಕ ಹಾಕಿ, ಬಳಿಕ ಪ್ರತಿಯೊಬ್ಬರಿಗೂ ಸಮಾನ ತೂಕ ನೀಡಿ ಆ ಪಾಲುಗಳ ಸರಾಸರಿ ಕಂಡುಕೊಂಡೆವು. ಶೇಕಡಾವಾರುಗಳನ್ನು ಪೂರ್ಣಾಂಕಕ್ಕೆ ಪೂರ್ಣಗೊಳಿಸಲಾಗಿದೆ; ಇತರ ಸಂಶೋಧನಾ ಚಟುವಟಿಕೆಗಳ ಪಾಲು 1%ಕ್ಕಿಂತ ಕಡಿಮೆ ಇತ್ತು.

68% ವಿಜ್ಞಾನಿಗಳು ಸಂಶೋಧನಾ ವಿಚಾರಗಳನ್ನು ಬೆಳೆಸಲು ChatGPT ಬಳಸಿದರು

ವಿಚಾರ ರೂಪಿಸಲು ವಿಜ್ಞಾನಿಗಳು ChatGPT ಹೇಗೆ ಬಳಸಿದರು ಎಂಬುದನ್ನು ನಾವು ಪರಿಶೀಲಿಸಿದೆವು. ಕೆಳಗಿನ ಅಂಕಿಅಂಶಗಳು ಸಂಶೋಧನಾ ವಿಚಾರಗಳ ಕುರಿತ ಅವರ ಸಂದೇಶಗಳನ್ನು ವಿವರಿಸುತ್ತವೆ.

ವಿಜ್ಞಾನಿಯ ನೇತೃತ್ವದಲ್ಲಿ

35%

ಸಂದರ್ಭಗಳಲ್ಲಿ, ವಿಜ್ಞಾನಿಗಳು ChatGPT ಪರಿಶೀಲಿಸಲು ನಿರ್ದಿಷ್ಟ ಪ್ರಶ್ನೆಯನ್ನು ಮುಂದಿಟ್ಟರು.

ಒಟ್ಟಾಗಿ ಬೆಳೆಸಿದ್ದು

36%

ಸಂದರ್ಭಗಳಲ್ಲಿ, ವಿಜ್ಞಾನಿಗಳು ಒಂದು ವಿಚಾರವನ್ನು ಮುಂದಿಟ್ಟು ಅದನ್ನು ಸುಧಾರಿಸಲು ChatGPTಗೆ ಕೇಳಿದರು.

ChatGPT ಸೂಚಿಸಿದ್ದು

23%

ಸಂದರ್ಭಗಳಲ್ಲಿ, ವಿಜ್ಞಾನಿಗಳು ಸಂಶೋಧನಾ ಪ್ರಶ್ನೆಯನ್ನು ಸೂಚಿಸಲು ChatGPTಗೆ ಕೇಳಿದರು.

ಇತರೆ

6%

ಈ ಸಂದೇಶವನ್ನು ಇತರ ಯಾವುದೇ ಚಟುವಟಿಕೆಯಡಿ ವರ್ಗೀಕರಿಸಲು ಸಾಧ್ಯವಾಗಲಿಲ್ಲ.

ಸಮೀಕ್ಷೆಗೆ ಪ್ರತಿಕ್ರಿಯಿಸಿದ 98% ವಿಜ್ಞಾನಿಗಳು AI ತಮ್ಮ ಕ್ಷೇತ್ರದಲ್ಲಿ ಆವಿಷ್ಕಾರಗಳನ್ನು ವೇಗಗೊಳಿಸುತ್ತದೆ ಎಂದು ನಿರೀಕ್ಷಿಸುತ್ತಾರೆ.

AI ಇಲ್ಲದೆ 10 ವರ್ಷ ಬೇಕಾಗುವ ಒಂದು ಆವಿಷ್ಕಾರವನ್ನು ಕಲ್ಪಿಸಿಕೊಂಡು, AI ನೆರವಿದ್ದರೆ ಅದಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂದು ಅಂದಾಜಿಸಲು ವಿವಿಧ ಕ್ಷೇತ್ರಗಳ ವಿಜ್ಞಾನಿಗಳನ್ನು ನಾವು ಕೇಳಿದೆವು.

ಈ ಪ್ರಶ್ನೆಗೆ 250 ಜನರು ಉತ್ತರಿಸಿದರು. ಪ್ರತಿಕ್ರಿಯಿಸಿದವರು ಹಲವು ಕ್ಷೇತ್ರಗಳನ್ನು ಆಯ್ಕೆ ಮಾಡಬಹುದಿತ್ತು. ಹೀಗಾಗಿ ಕ್ಷೇತ್ರವಾರು ಗುಂಪುಗಳಲ್ಲಿ ಕೆಲವರು ಪುನರಾವರ್ತನೆಯಾಗುತ್ತಾರೆ. ಶೇಕಡಾವಾರುಗಳನ್ನು ಪೂರ್ಣಾಂಕಕ್ಕೆ ಪೂರ್ಣಗೊಳಿಸಿರುವುದರಿಂದ ಅವುಗಳ ಮೊತ್ತ 100% ಆಗದೇ ಇರಬಹುದು.

ChatGPTಗೆ ಕಾರ್ಯಗಳನ್ನು ವಹಿಸಿದ ನಂತರವೂ ವಿಜ್ಞಾನಿಗಳು ಅವುಗಳಲ್ಲಿ ತೊಡಗಿಸಿಕೊಳ್ಳುತ್ತಾರೆ

ವಿವಿಧ ಸಂಶೋಧನಾ ಚಟುವಟಿಕೆಗಳಲ್ಲಿ ChatGPT ನೀಡಿದ ಉತ್ತರಗಳನ್ನು ಸ್ಪಷ್ಟಪಡಿಸಲು, ಪರಿಶೀಲಿಸಲು ಅಥವಾ ಪರಿಷ್ಕರಿಸಲು ವಿಜ್ಞಾನಿಗಳು ಎಷ್ಟು ಬಾರಿ ಮರುವಿನಂತಿ ಮಾಡಿದರು ಎಂಬುದನ್ನು ನಾವು ಅಳೆದೆವು.

ಪ್ರತಿ ವಿಜ್ಞಾನಿಯ ವಿನಂತಿಗಳಲ್ಲಿ ಮರುವಿನಂತಿಗೆ ಕಾರಣವಾದವುಗಳ ಸರಾಸರಿ ಶೇಕಡಾವಾರು.

AI ವೈಜ್ಞಾನಿಕ ಪ್ರಗತಿಯನ್ನು ಹೇಗೆ ಮುನ್ನಡೆಸಬಹುದು?

ಆವಿಷ್ಕಾರಗಳು ವೇಗಗೊಳ್ಳುತ್ತವೆ ಎಂದು ನಿರೀಕ್ಷಿಸಿದ ವಿಜ್ಞಾನಿಗಳನ್ನು ಅದಕ್ಕೆ ಕಾರಣ ವಿವರಿಸಲು ನಾವು ಕೇಳಿದೆವು. ಅವರ ಉತ್ತರಗಳಲ್ಲಿ ಮೂರು ಕಾರಣಗಳು ಪ್ರಮುಖವಾಗಿ ಕಂಡುಬಂದವು.

52%

ಸಂಶೋಧನೆಯನ್ನು ಬೇಗ ಪೂರ್ಣಗೊಳಿಸುವುದು

23%

ಹೆಚ್ಚು ಫಲಪ್ರದವಾಗಬಲ್ಲ ಸಂಶೋಧನಾ ಪ್ರಶ್ನೆಗಳನ್ನು ಕಂಡುಕೊಳ್ಳುವುದು

14%

ಇನ್ನಷ್ಟು ವೈವಿಧ್ಯಮಯ ಪ್ರಶ್ನೆಗಳನ್ನು ಅನ್ವೇಷಿಸುವುದು

11%

ಇತರೆ

ವಿಜ್ಞಾನಿಗಳು ಹಲವು ಕಾರಣಗಳನ್ನು ನೀಡಬಹುದಿತ್ತು. 224 ಲಿಖಿತ ಪ್ರತಿಕ್ರಿಯೆಗಳಲ್ಲಿ ಗುರುತಿಸಲಾದ ಒಟ್ಟು 367 ಕಾರಣಗಳಲ್ಲಿ ಪ್ರತಿಯೊಂದು ಕಾರಣದ ಪಾಲನ್ನು ಶೇಕಡಾವಾರು ತೋರಿಸಲಾಗಿದೆ.

ಮುಂದಿನ ಹಾದಿ

ಈ ಅಧ್ಯಯನದಲ್ಲಿನ ವಿಜ್ಞಾನಿಗಳು ವಿಚಾರಗಳನ್ನು ಅನ್ವೇಷಿಸಲು, ಪುರಾವೆಗಳನ್ನು ವಿಶ್ಲೇಷಿಸಲು, ಸಂಕೇತಸೂಚಿಗಳನ್ನು ಬರೆಯಲು ಮತ್ತು ತಮ್ಮ ಸಂಶೋಧನಾ ಫಲಿತಾಂಶಗಳನ್ನು ತಿಳಿಸಲು ChatGPT ಬಳಸಿದರು. ಅವರ ಪ್ರತಿಕ್ರಿಯೆಗಳು ಸಮಯ ಉಳಿಸುವುದಕ್ಕಿಂತ ಮಿಗಿಲಾದ ಗುರಿಗಳನ್ನೂ ಸೂಚಿಸುತ್ತವೆ: ಹೆಚ್ಚು ಫಲಪ್ರದವಾಗಬಲ್ಲ ಪ್ರಶ್ನೆಗಳನ್ನು ಕಂಡುಕೊಳ್ಳುವುದು ಮತ್ತು ಇನ್ನಷ್ಟು ವ್ಯಾಪಕವಾದ ಸಂಶೋಧನೆ ಕೈಗೊಳ್ಳುವುದು.

ಈ ನಿರೀಕ್ಷೆಗಳು ನಿಜವಾಗಿಯೂ ಆವಿಷ್ಕಾರಗಳನ್ನು ವೇಗಗೊಳಿಸುತ್ತವೆಯೇ ಎಂದು ತಿಳಿಯಲು ಹೆಚ್ಚಿನ ಸಂಶೋಧನೆ ಅಗತ್ಯ. ವಿಜ್ಞಾನಿಗಳು ತಮ್ಮ ವಿಚಾರಗಳನ್ನು ಪರೀಕ್ಷಿಸಲು ಅಗತ್ಯವಾದ ಹಣಕಾಸು, ಸಿಬ್ಬಂದಿ ಮತ್ತು ಪ್ರಯೋಗ ಸಾಮರ್ಥ್ಯದ ಮೇಲೂ ಪ್ರಗತಿ ಅವಲಂಬಿತವಾಗಿರುತ್ತದೆ.

ತಮ್ಮ ಕೆಲಸದಲ್ಲಿ AI ಏನೆಲ್ಲ ಸಾಧ್ಯವಾಗಿಸಬಹುದು ಎಂಬುದನ್ನು ಅನ್ವೇಷಿಸಲು ಇನ್ನಷ್ಟು ವಿಜ್ಞಾನಿಗಳಿಗೆ ನೆರವಾಗುವುದು ನಮ್ಮ ಆಶಯ. ಈ ಸಂಶೋಧನೆಯ ಜೊತೆಗೆ, ವಿಶ್ವಾದ್ಯಂತ 200,000ಕ್ಕೂ ಹೆಚ್ಚು ಸಂಶೋಧಕರಿಗೆ ಉಚಿತ ಪ್ರವೇಶ ಒದಗಿಸುವ ಮೂಲಕ ನಾವು ಶೈಕ್ಷಣಿಕ ಸಂಶೋಧಕರಿಗಾಗಿ ChatGPT⁠ ಯೋಜನೆಯನ್ನು ವಿಸ್ತರಿಸುತ್ತಿದ್ದೇವೆ. AGI ಇಡೀ ಮಾನವಕುಲಕ್ಕೆ ಪ್ರಯೋಜನಕಾರಿಯಾಗುವುದನ್ನು ಖಚಿತಪಡಿಸುವ ನಮ್ಮ ಧ್ಯೇಯದಲ್ಲಿ, ವಿಜ್ಞಾನಿಗಳು ತಮ್ಮ ವಿಚಾರಗಳನ್ನು ಜನರ ಬದುಕನ್ನು ಸುಧಾರಿಸುವ ಆವಿಷ್ಕಾರಗಳಾಗಿ ಪರಿವರ್ತಿಸಲು ನೆರವಾಗುವುದು ಮುಖ್ಯವಾಗಿದೆ.

“ChatGPTಯಂತಹ ಸಾಧನಗಳು ವೈಜ್ಞಾನಿಕ ಆವಿಷ್ಕಾರಗಳನ್ನು ವೇಗಗೊಳಿಸಲು ನಮಗೆ ನೆರವಾಗುತ್ತಿವೆ. ನನ್ನಂತಹ ವಿಜ್ಞಾನಿಗೆ ಇದು ನಿಜಕ್ಕೂ ಮುಕ್ತವಾಗಿ ಪ್ರಯೋಗಿಸಬಹುದಾದ ಅಂಗಳ.”

ಸೇಸಾರ್ ದೆ ಲಾ ಫುವೆಂತೆ

ಸೂಕ್ಷ್ಮಜೀವಿ ನಿರೋಧಕಗಳ ಸಂಶೋಧನೆ⁠

ಸಂಶೋಧನೆಯ ಕುರಿತು