ChatGPT ಮೂಲಕ ಆ್ಯಂಟಿಬಯಾಟಿಕ್‌ಗಳ ಅನ್ವೇಷಣೆಗೆ ವೇಗ
ಆ್ಯಂಟಿಬಯೋಟಿಕ್ ಪ್ರತಿರೋಧದ ವಿರುದ್ಧ ಹೋರಾಡಲು ಡಾ. ಸೆಸಾರ್ ಡೆ ಲಾ ಫುವೆಂಟೆ ಮತ್ತುಮತ್ತು ಅವರ ತಂಡವು ಹೊಸ ಸಾಧನಗಳನ್ನು ಬಳಸುತ್ತಿದ್ದಾರೆ.

“ನಮಗೆ ತಿಳಿದಿರುವುದು ಬಹಳ ಕಡಿಮೆ ಮತ್ತು ಅನ್ವೇಷಿಸಲು ಎಷ್ಟೊಂದು ಬಾಕಿ ಇದೆ ಎಂಬುದನ್ನು ಯೋಚಿಸಿದರೆ ಅಚ್ಚರಿಯಾಗುತ್ತದೆ. ಭವಿಷ್ಯ ಅವರದ್ದೇ ಎಂಬುದನ್ನು ಯುವಜನರಿಗೆ ಅರ್ಥಮಾಡಿಸಲು ನಾನು ಈ ಸಂಗತಿಯನ್ನು ಅವರಿಗೆ ತಿಳಿಸಲು ಪ್ರಯತ್ನಿಸುತ್ತೇನೆ. ನಮಗೆ ಈ ಪ್ರಪಂಚದ ಬಗ್ಗೆ ತಿಳಿದಿರುವುದು ಬಹಳ ಕಡಿಮೆ. ಅದೊಂದು ರೋಚಕ ಸಂಗತಿ, ಏಕೆಂದರೆ ವಿಜ್ಞಾನ ನಮಗೆ ನೆರವಾಗುವುದು ಅಲ್ಲಿಯೇು.” —ಡಾ. ಸೆಸಾರ್ ಡೆ ಲಾ ಫುವೆಂಟೆ
“ChatGPT ಯಂತಹ ಸಾಧನಗಳು ವೈಜ್ಞಾನಿಕ ಅನ್ವೇಷಣೆಯನ್ನು ವೇಗಗೊಳಿಸಲು ನಮಗೆ ನೆರವಾಗುತ್ತಿವೆ. ನನ್ನಂತಹ ವಿಜ್ಞಾನಿಗೆ ಇದು ನಿಜಕ್ಕೂ ಪ್ರಯೋಗಗಳಿಗೆ ಸಿಕ್ಕ ಮುಕ್ತ ವೇದಿಕೆಯಿದ್ದಂತೆೆ.”
ಹೆಚ್ಚುತ್ತಿರುವ ಸಮಸ್ಯೆ
ಆಧುನಿಕ ವೈದ್ಯಕೀಯ ಪದ್ಧತಿಯು ಪರಿಣಾಮಕಾರಿ ಆ್ಯಂಟಿಬಯಾಟಿಕ್‌ಗಳನ್ನು ಅವಲಂಬಿಸಿದೆ. ಸಾಮಾನ್ಯ ಕಾಯಿಲೆಗಳು, ಶಸ್ತ್ರಚಿಕಿತ್ಸೆಗಳು, ಹೆರಿಗೆ ಮತ್ತು ಇತರ ಸಂದರ್ಭಗಳಿಂದ ಚೇತರಿಸಿಕೊಳ್ಳಲು ಅವು ನೆರವಾಗುತ್ತವೆ. ಆದರೆ ಇದಕ್ಕೆ ಸಮಸ್ಯೆಯೊಂದು ಎದುರಾಗುತ್ತಿದೆೆ: ಆ್ಯಂಟಿಬಯಾಟಿಕ್‌ಗಳು ಎದುರಿಸುವ ಬ್ಯಾಕ್ಟೀರಿಯಾಗಳು ಸುಲಭವಾಗಿ ಮಣಿಯುವುದಿಲ್ಲ. ಅವುಗಳ ವಿರುದ್ಧ ಆ್ಯಂಟಿಬಯಾಟಿಕ್‌ಗಳನ್ನು ಹೆಚ್ಚು ಬಳಸುತ್ತೇವೆಯೋ, ಅಷ್ಟೇ ಹೆಚ್ಚಾಗಿ ನಿರೋಧಕ ಶಕ್ತಿ ಪಡೆದುಕೊಳ್ಳುವ ಪ್ರಭೇದಗಳು ಪ್ರಬಲವಾಗಲು ಹೆಚ್ಚು ಅವಕಾಶ ಸಿಗುತ್ತದೆ. ಇದನ್ನು 'ಆ್ಯಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್' (AMR - ಸೂಕ್ಷ್ಮಜೀವಿ ನಿರೋಧಕತೆ) ಎನ್ನಲಾಗುತ್ತದೆ. ಪ್ರತಿ ವರ್ಷ ಸುಮಾರು 50 ಲಕ್ಷ ಸಾವುಗಳು ಬ್ಯಾಕ್ಟೀರಿಯಾದ AMRಗೆ ಸಂಬಂಧಿಸಿವೆ. 2050ರ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆಯಿದೆ.
AMR ಅನ್ನು ಎದುರಿಸಲು ಹೊಸ ಆ್ಯಂಟಿಬಯಾಟಿಕ್‌ಗಳು ಅತ್ಯಗತ್ಯ. ಆದರೆ ಸಕ್ರಿಯ ಅಣುಗಳನ್ನು ಹುಡುಕಲು ವಿಜ್ಞಾನಿಗಳು ಪ್ರಕೃತಿಯಲ್ಲಿ ಮಣ್ಣು, ಸಸ್ಯಗಳು ಮತ್ತು ಇತರ ಸಾವಯವ ವಸ್ತುಗಳನ್ನು ಪರಿಶೋಧಿಸುವ ಸಾಂಪ್ರದಾಯಿಕ ವಿಧಾನವು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಪ್ರಯತ್ನ-ತಪ್ಪುಗಳ ಮೇಲೆ ಅವಲಂಬಿತವಾಗಿದೆ. ChatGPT ಮತ್ತು Codex ನಂತಹ ಸಾಧನಗಳು, AMR ವಿರುದ್ಧದ ಹೋರಾಟದಲ್ಲಿ ಹೊಸ ಅಣುಗಳನ್ನು ಗುರುತಿಸಲು ಡಾ. ಸೆಸಾರ್ ಡೆ ಲಾ ಫುವೆಂಟೆ ಮತ್ತು ಅವರ ತಂಡವು ವಿನೂತನ ಹಾಗೂ ವೇಗವಾದ ವಿಧಾನವನ್ನು ಅನುಸರಿಸಲು ನೆರವಾಗುತ್ತಿವೆ. “ನಾವು ಎಲ್ಲವನ್ನೂ ಡಿಜಿಟಲ್ ವೇಗದಲ್ಲಿ ಮಾಡುತ್ತೇವೆ” ಎಂದು ಅವರು ಹೇಳುತ್ತಾರೆ.
“ಅನೇಕ ಬಾರಿ ನಾನು ಒಂದು ಲೋಟ ಕಾಫಿ ಕುಡಿದು ಮುಗಿಸುವಷ್ಟರಲ್ಲಿ, ನನ್ನ ತಂಡವು ಮುಂದಿನ ಆ್ಯಂಟಿಬಯಾಟಿಕ್ ಆಗಬಹುದಾದ ಹಲವಾರು ಹೊಸ ಅಣುಗಳನ್ನು ಕಂಡುಹಿಡಿದಿರುತ್ತದೆ.”

“ನಮ್ಮ ಪ್ರಯೋಗಾಲಯವು ಹೆಚ್ಚಿನ ಅಪಾಯವಿರುವ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತದೆ. ಆದರೆ ಅವುಗಳನ್ನು ಯಶಸ್ವಿಗೊಳಿಸಿದಾಗ ಫಲಿತಾಂಶಗಳು ಅದ್ಭುತವಾಗಿರುತ್ತವೆ.”
—ಮಾರ್ಸೆಲೊ ಡೆರ್ ಟೊರೋಸಿಯನ್ ಟೊರೆಸ್

“Codex ಒಂದು ಅತ್ಯುತ್ತಮ ಕೋ-ಪೈಲೆಟ್ನಂತೆ. ನಾನು ಏನನ್ನಾದರೂ ಜಾರಿಗೆ ತರಲು ಬಯಸಿದರೆ, Codex ಅದನ್ನು ಕ್ಷಣಾರ್ಧದಲ್ಲಿ ಸಿದ್ಧಪಡಿಸಬಲ್ಲದು. ಅದು ನನ್ನ ಸಮಯವನ್ನು ಉಳಿಸಿ, ಇತರ ಕೆಲಸಗಳನ್ನು ಮಾಡಲು ಅವಕಾಶ ನೀಡುತ್ತದೆ.”
—ಎರಿಕ್ ಹಾರ್ಟ್ಮನ್

“ಪ್ರಾಯೋಗಿಕ ವಿಜ್ಞಾನಿಯಾದ ನನಗೆ ಆಲ್ಗಾರಿದಮ್ ಸಿದ್ಧಪಡಿಸುವುದೇ ಬಹುದೊಡ್ಡ ಹೆಜ್ಜೆ. ನಾನು Codex ಬಳಸಿ ತಂತ್ರಾಂಶದ ಸ್ಕ್ರಿಪ್ಟ್ ಬರೆಯಬಹುದು ಮತ್ತು ಪ್ರತಿ ಪ್ರಯೋಗದಲ್ಲೂ ನನ್ನ ದತ್ತಾಂಶವನ್ನು ಏಕರೂಪವಾಗಿ ಗ್ರಾಫ್ನಲ್ಲಿ ತೋರಿಸಬಹುದು.”
—ಏಂಜೆಲಾ ಸೆಸಾರೊ
ಜೀವಶಾಸ್ತ್ರವನ್ನೂ ಕೋಡಿಂಗ್ ಆಗಿ ಪರಿಗಣಿಸುವುದು
ಈ ಸಮಸ್ಯೆಯನ್ನು ಮಾಹಿತಿಯ ಸಮಸ್ಯೆಯಾಗಿ ಪರಿಗಣಿಸಿದ್ದು ಡೆ ಲಾ ಫುವೆಂಟೆ ಪ್ರಯೋಗಾಲಯದ ಪ್ರಮುಖ ಸಾಧನೆಗಳಲ್ಲಿ ಒಂದು: ಜೀವದ ಮೂಲ ಘಟಕವಾದ DNA ಕೇವಲ ಒಂದು ಕೋಡ್ ಅಷ್ಟೇ. ನಮ್ಮ ಜಗತ್ತನ್ನು ರೂಪಿಸುವ ಸಂಕೀರ್ಣ ವ್ಯವಸ್ಥೆಗಳನ್ನು ತ್ವರಿತವಾಗಿ ಪರಿಶೀಲಿಸಿ, ವರ್ಷಗಳ ಬದಲು ಕೆಲವೇ ಗಂಟೆಗಳಲ್ಲಿ ಹೊಸ ಸಂಭಾವ್ಯ ಆ್ಯಂಟಿಬಯಾಟಿಕ್‌ಗಳನ್ನು ಗುರುತಿಸಬಲ್ಲ ಆಲ್ಗಾರಿದಮ್‌ಗಳನ್ನು ರೂಪಿಸಲು ChatGPT ಯಂತಹ ಸಾಧನಗಳು ಅವರಿಗೆ ನೆರವಾಗುತ್ತವೆ.
“ಈಗ ನಾವು ಐದು ಅಥವಾ ಆರು ವರ್ಷಗಳ ಬದಲು ಕೆಲವೇ ಗಂಟೆಗಳಲ್ಲಿ ಹೊಸ ಆ್ಯಂಟಿಬಯಾಟಿಕ್ ಅಣುಗಳನ್ನು ಕಂಡುಹಿಡಿಯಬಹುದು.”

“Codex ನೆರವಿನಿಂದ ಹಿಂದೆಂದೂ ಕೋಡಿಂಗ್ ಮಾಡದ ಮತ್ತು ಕಂಪ್ಯೂಟರ್‌ಸೈನ್ಸ್‌ನ ಭಾಷೆಯ ಅರಿವಿಲ್ಲದ ವ್ಯಕ್ತಿಯೂ ಈಗ ಅದನ್ನು ಮಾಡಬಹುದು.”
—ಡಾ. ಸೆಸಾರ್ ಡೆ ಲಾ ಫುವೆಂಟೆ

ಏಂಜೆಲಾ ಪರೀಕ್ಷೆ ಮಾಡಬೇಕಾದ ಅಣುಗಳನ್ನು ಸೃಷ್ಟಿಸಲು ವೆಟ್ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಾರೆ.
ChatGPTಯು ಡೆ ಲಾ ಫುವೆಂಟೆ ಪ್ರಯೋಗಾಲಯದ ಕಾರ್ಯವಿಧಾನದ ಅವಿಭಾಜ್ಯ ಭಾಗವಾಗಿದೆ. “ಇದು ನಮ್ಮ ಪ್ರಯೋಗಾಲಯದ ಜ್ಞಾನಕೋಶದಂತಾಗಿದೆ. ತಂಡದ ವಿವಿಧ ಸದಸ್ಯರು ವಿಜ್ಞಾನದ ಕುರಿತು ಹೇಗೆ ಯೋಚಿಸುತ್ತಾರೆ ಎಂಬುದು ಅದಕ್ಕೆ ತಿಳಿದಿದೆ, ಏಕೆಂದರೆ ನಾವು ನಮ್ಮ ಅನೇಕ ಆಲೋಚನೆಗಳನ್ನು ಅದರಲ್ಲಿ ಹಂಚಿಕೊಳ್ಳುತ್ತೇವೆ” ಎಂದು ಡಾ. ಡೆ ಲಾ ಫುವೆಂಟೆ ಹೇಳುತ್ತಾರೆ. “ಇದು ನಿಜವಾಗಿಯೂ ನಮ್ಮ ಚಿಂತನೆೆ: ನಮ್ಮ ಆಲೋಚನೆಗಳ ಸೃಷ್ಟಿ, ಜಾಣ್ಮೆ ಮತ್ತು ಮಾನವರಾಗಿ ನಾವೇನು ನೀಡಲು ಸಾಧ್ಯವೋ ಅದೆಲ್ಲವನ್ನೂ ಹಿಡಿದಿಡುತ್ತದೆ.”
ಸಾಂಪ್ರದಾಯಿಕ ವಿಜ್ಞಾನಿಗಳಿಂದ ಹಿಡಿದು ಕಂಪ್ಯೂಟೇಶನಲ್ ಜೀವವಿಜ್ಞಾನಿಗಳು ಮತ್ತು ಮೆಷೀನ್ ಲರ್ನಿಂಗ್ ಎಂಜಿನಿಯರ್‌ಗಳವರೆಗಿನ ತಂಡದ ಸದಸ್ಯರ ನಡುವಿನ ಅಡೆತಡೆಗಳನ್ನು Codex ನಿವಾರಿಸಿದೆ. “ಐದು ವರ್ಷಗಳ ಹಿಂದೆ ದತ್ತಾಂಶ ವಿಶ್ಲೇಷಣೆಯ ಹೊರತಾಗಿ ಕಂಪ್ಯೂಟರ್ ಅನ್ನು ಮುಟ್ಟದವರೂ ಸಹ ಈಗ ಕಂಪ್ಯೂಟೇಶನಲ್ ಜೀವಶಾಸ್ತ್ರದಲ್ಲಿ ಕೆಲಸ ಮಾಡಬಲ್ಲರು. ಅವರು ಆಲ್ಗಾರಿದಮ್‌ಗಳನ್ನು ಬರೆದು, ತಮ್ಮ ದತ್ತಾಂಶದಲ್ಲಿನ ಮಾದರಿಗಳನ್ನು ಗುರುತಿಸಬಲ್ಲರು ಅಥವಾ ಹಿಂದೆ ಅಸಾಧ್ಯವಾಗಿದ್ದ ರೀತಿಯಲ್ಲಿ ಫಲಿತಾಂಶಗಳನ್ನು ದೃಶ್ಯೀಕರಿಸಬಹುದು.”

“ನಮ್ಮ ಪ್ರಯೋಗಾಲಯದಲ್ಲಿ ಬಹಳ ವೈವಿಧ್ಯವಿದೆ: ನಮ್ಮಲ್ಲಿ ರಸಾಯನಶಾಸ್ತ್ರಜ್ಞರು, ಜೀವಶಾಸ್ತ್ರಜ್ಞರು ಮತ್ತು ಗಣಕ ವಿಜ್ಞಾನಿಗಳು ಇದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅನೇಕ ಪ್ರತಿಭಾವಂತರು ನಮ್ಮಲ್ಲಿದ್ದಾರೆ.”
—ಜಿಯಾನಿಂಗ್ ಬಾಯಿ

ಡೆ ಲಾ ಫುವೆಂಟೆ ಪ್ರಯೋಗಾಲಯವು ಬೃಹತ್ ಪ್ರಮಾಣದಲ್ಲಿ ಶೋಧಿಸುವ ಆಣ್ವಿಕ ರಚನೆಗಳ ದೃಶ್ಯೀಕರಣ.

“AI ವಿವಿಧ ವಿವಿಧ ವಿಷಯಗಳ ನಡುವೆ ಸಂಪರ್ಕ ಸೃಷ್ಟಿಸಬಹುದು. ಇದರಿಂದ ಉತ್ತಮ ಪ್ರಶ್ನೆಗಳನ್ನು ಕೇಳಲು ಮತ್ತು ಅತ್ಯಂತ ಕಠಿಣ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ವಿಧಾನಗಳನ್ನು ರೂಪಿಸಲು ನಮಗೆ ನೆರವಾಗುತ್ತದೆ.”
—ಟಿಯಾನಾಂಗ್ ಲೆಂಗ್

“ನಾವು ಬೃಹತ್ ಸಮಸ್ಯೆಗಳನ್ನು ಎದುರಿಸಲು ಪ್ರಯತ್ನಿಸದಿದ್ದರೆ, ನಾನು ನನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಎಂದೇ ಅರ್ಥ.”
ಆ್ಯಂಟಿಬಯಾಟಿಕ್‌ಗಳ ಭವಿಷ್ಯ
ಮಾನವನ ಜಾಣ್ಮೆ ಮತ್ತು ಯಂತ್ರ ಬುದ್ಧಿಮತ್ತೆಯ ಸಂಯೋಜನೆಯು ವೈದ್ಯಕೀಯ ಕ್ಷೇತ್ರದಲ್ಲಿ ರೋಚಕ ಭವಿಷ್ಯಕ್ಕೆ ದಾರಿ ತೋರಿಸುತ್ತಿದೆ. “ಕೇವಲ ಎರಡು ವರ್ಷಗಳ ಹಿಂದೆಯೂ, AMR ಮತ್ತು ಹೊಸ ಅಣುಗಳನ್ನು ರೂಪಿಸುವ ಮಾನವ ಸಾಮರ್ಥ್ಯದ ನಡುವಿನ ಪೈಪೋಟಿಯಲ್ಲಿ ನಾವು ಹೆಜ್ಜೆಗೂಡಿಸಬಲ್ಲೆವೇ ಎಂಬ ಬಗ್ಗೆ ನನಗೆ ಆಶಾವಾದವಿರಲಿಲ್ಲೆ” ಎಂದು ಅವರು ಹೇಳುತ್ತಾರೆ. “ಆದರೆ ChatGPT ಯಂತಹ ಸಾಧನಗಳ ನೆರವಿನಿಂದ ನಾವು ಇತ್ತೀಚೆಗೆ ಅಭಿವೃದ್ಧಿಪಡಿಸುತ್ತಿರುವ ಕೆಲವು ವ್ಯವಸ್ಥೆಗಳು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಭರವಸೆ ಮೂಡಿಸಿವೆ.” ಡಾ. ಡೆ ಲಾ ಫುವೆಂಟೆ ಮಾಡುವ ಪ್ರತಿಯೊಂದು ಕೆಲಸವೂ ಒಂದೇ ಗುರಿಯನ್ನು ಹೊಂದಿದೆ: ನೋವನ್ನು ಕಡಿಮೆ ಮಾಡಿ ಜೀವಗಳನ್ನು ಉಳಿಸುವುದು. “ನಾವು ಇಂದು ಮಾಡುತ್ತಿರುವ ಕೆಲಸಗಳನ್ನು ಸಾಧ್ಯವಾಗಿಸುವ ಇಂತಹ ಸಾಧನಗಳಿಗಾಗಿೇಯ ನಾನು ಜೀವನಪೂರ್ತಿ ಕಾಯುತ್ತಿದ್ದೆ.”

“ನಾವು ಕಂಡುಹಿಡಿದ ಅನೇಕ ಅಣುಗಳು ಇಂದಿನ ರೋಗಕಾರಕಗಳನ್ನು ನಾಶಮಾಡಬಲ್ಲವು ಎಂಬುದನ್ನು ಕಂಡಿದ್ದೇವೆ.”
—ಡಾ. ಸೆಸಾರ್ ಡೆ ಲಾ ಫುವೆಂಟೆ
“ನೀವು ಕಂಪ್ಯೂಟರ್‌ನಲ್ಲಿ ಸೃಷ್ಟಿಸಿದ ಅಣುವೊಂದು ಜೀವಗಳನ್ನು ಉಳಿಸಬಲ್ಲದು ಎಂದು ಕಲ್ಪಿಸಿಕೊಳ್ಳಿ. ವಿಶ್ವದ ಇತಿಹಾಸದಲ್ಲಿ ಯಾರೂ ಕಂಡುಹಿಡಿಯದ ಸಂಗತಿಯನ್ನು ಅನ್ವೇಷಿಸುವ ಆ ಕ್ಷಣಗಳಿಗಾಗಿಯೇ ವಿಜ್ಞಾನಿಗಳು ಬದುಕುತ್ತಾರೆ ಎಂದು ನನಗನಿಸುತ್ತದೆ.”