OpenAI

ನವೆಂಬರ್ 10, 2026

ಉತ್ಪನ್ನ

‘ChatGPT ಯಲ್ಲಿ ಬಿಸಿನೆಸ್‌ಗಳು’ ಸೌಲಭ್ಯವನ್ನು ಪರಿಚಯಿಸುತ್ತಿದ್ದೇವೆ

ChatGPT ಯಲ್ಲಿ ನಿಮ್ಮ ಬಿಸಿನೆಸ್ ಅನ್ನು ಕ್ಲೇಮ್ ಮಾಡಿ, ಮಾಹಿತಿಯನ್ನು ಅಪ್‌ಡೇಟ್ ಮಾಡಿ ಮತ್ತು ಜನರು ನಿಮ್ಮೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ತಿಳಿಯಿರಿ

ನಾವು ‘ChatGPT ಯಲ್ಲಿ ಬಿಸಿನೆಸ್‌ಗಳು’ ಸೌಲಭ್ಯದ ಬೀಟಾ ಆವೃತ್ತಿಯನ್ನು ಪರಿಚಯಿಸುತ್ತಿದ್ದೇವೆ. ಪ್ರತಿ ವಾರ ChatGPT ಬಳಸುವ 120 ಕೋಟಿ ಜನರೊಂದಿಗೆ ಸಂಪರ್ಕ ಸಾಧಿಸಲು ಇದು ಬಿಸಿನೆಸ್‌ಗಳಿಗೆ ಹೊಸ ಮಾರ್ಗವನ್ನು ಒದಗಿಸುತ್ತದೆ. ಬಿಸಿನೆಸ್ ಹಬ್⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಮೂಲಕ ಸಂಸ್ಥೆಗಳು ತಮ್ಮ ಬಿಸಿನೆಸ್ ಅನ್ನು ಕ್ಲೇಮ್ ಮಾಡಬಹುದು, ತಮ್ಮ ಮಾಹಿತಿಯನ್ನು ನಿರ್ವಹಿಸಬಹುದು ಮತ್ತು ChatGPT ಯಲ್ಲಿ ಜನರು ತಮ್ಮೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬ ಒಳನೋಟಗಳನ್ನು ಪಡೆಯಬಹುದು. ಜೊತೆಗೆ, ಬಿಸಿನೆಸ್ ಏಜೆಂಟ್‌ಗಳ ಮೂಲಕ ಬಳಕೆದಾರರೊಂದಿಗೆ ಸಂವಹನ ನಡೆಸಲು ಬಿಸಿನೆಸ್‌ಗಳಿಗೆ ಪರಿಣಾಮಕಾರಿ ಹೊಸ ಮಾರ್ಗವನ್ನು ಒದಗಿಸುತ್ತಿದ್ದೇವೆ. ಮೊದಲ ಹಂತದಲ್ಲಿ ಇದು ಅಮೆರಿಕದ ಅರ್ಹ ಇ-ಕಾಮರ್ಸ್ ಮತ್ತು ಆನ್‌ಲೈನ್ ಸೇವೆಯ ಬಿಸಿನೆಸ್‌ಗಳಿಗೆ ಲಭ್ಯವಾಗಲಿದೆ.

ಜನರು ಆಯ್ಕೆಗಳನ್ನು ಪರಿಶೀಲಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಅವರೊಂದಿಗೆ ಸಂಪರ್ಕ ಸಾಧಿಸಲು ಈ ಸೌಲಭ್ಯಗಳು ಒಟ್ಟಾಗಿ ಬಿಸಿನೆಸ್‌ಗಳಿಗೆ ಇನ್ನಷ್ಟು ಮಾರ್ಗಗಳನ್ನು ಒದಗಿಸುತ್ತವೆ. ಹೆಚ್ಚಿನ ಬಿಸಿನೆಸ್‌ಗಳ ಸೇರ್ಪಡೆ, ಅಪ್-ಟು-ಡೇಟ್ ಮಾಹಿತಿ ಮತ್ತು ಬಿಸಿನೆಸ್ ಏಜೆಂಟ್‌ನ ಮೂಲಕ ಆಯಾ ಬಿಸಿನೆಸ್‌ನೊಂದಿಗೆ ಸಂಪರ್ಕ ಸಾಧಿಸುವ ಅವಕಾಶದಿಂದ, ಜನರು ChatGPT ಯಲ್ಲಿ ವ್ಯಾಪಾರಗಳನ್ನು ಹುಡುಕುವುದು ಮತ್ತು ಅವುಗಳೊಂದಿಗೆ ಸಂವಹನ ನಡೆಸುವುದು ಇನ್ನಷ್ಟು ಸುಲಭವಾಗುತ್ತದೆ. ಈ ಎಲ್ಲಾ ಅನುಭವಗಳಲ್ಲೂ, ಜನರು ChatGPT ಯಲ್ಲಿ ಇಟ್ಟಿರುವ ನಂಬಿಕೆಯನ್ನು ಕಾಪಾಡುವುದೇ ನಮ್ಮ ಮಾರ್ಗದರ್ಶಿ ತತ್ವವಾಗಿ ಉಳಿಯುತ್ತದೆ.

ChatGPT ಯಲ್ಲಿ ನಿಮ್ಮ ಬಿಸಿನೆಸ್ ಅನ್ನು ಕ್ಲೇಮ್ ಮಾಡಿ

ಬಿಸಿನೆಸ್ ಹಬ್‌ನಲ್ಲಿ ಕಂಪನಿಗಳು ChatGPT ಯಲ್ಲಿರುವ ತಮ್ಮ ಸಂಸ್ಥೆಯನ್ನು ಕ್ಲೇಮ್ ಮಾಡಬಹುದು. ಪರಿಶೀಲನೆ ಪೂರ್ಣಗೊಂಡ ನಂತರ, ಪ್ರಮುಖ ವಿವರಗಳನ್ನು ಅಪ್‌ಡೇಟ್ ಮಾಡಬಹುದು ಮತ್ತು ಬೆಲೆ ಹಾಗೂ ಲಭ್ಯತೆಯ ಮಾಹಿತಿಯಿರುವ ಉತ್ಪನ್ನದ ಫೀಡ್‌ಳನ್ನು ತಾವೇ ಸೇರಿಸಬಹುದು. ಇದು ChatGPT ಗೆ ಮಾಹಿತಿ ಒದಗಿಸಲು ಬಿಸಿನೆಸ್‌ಗಳಿಗೆ ಹೊಸ ಮಾರ್ಗ ನೀಡುತ್ತದೆ. ಇದರಿಂದ ಜನರು ಅತ್ಯಂತ ನಿಖರವಾದ, ಅಪ್-ಟು-ಡೇಟ್ ಆದ ವಿವರಗಳನ್ನು ಬಳಸಿ ಉತ್ಪನ್ನಗಳು ಮತ್ತು ಸೇವೆಗಳನ್ನು ಅನ್ವೇಷಿಸಬಹುದು.

ChatGPT ಲಭ್ಯವಿರುವ ಪ್ರದೇಶದಲ್ಲಿನ ಯಾವುದೇ ಅರ್ಹ ಸಂಸ್ಥೆಯು ಬಿಸಿನೆಸ್ ಹಬ್ ಮೂಲಕ ChatGPT ಯಲ್ಲಿ ತನ್ನ ಬಿಸಿನೆಸ್ ಅನ್ನು ಕ್ಲೇಮ್ ಮಾಡಬಹುದು. ಈಗಾಗಲೇ OpenAI ಉದ್ಯಮ ಸೇವೆಗಳನ್ನು ಬಳಸುತ್ತಿರುವ ಗ್ರಾಹಕರು ಮತ್ತು ಜಾಹೀರಾತುದಾರರು ತಮ್ಮ ಬಿಸಿನೆಸ್ ಅನ್ನು ಕ್ಲೇಮ್ ಮಾಡಲು ತಮ್ಮ OpenAI ಪ್ರತಿನಿಧಿಯೊಂದಿಗೆ ನೇರವಾಗಿ ಕೆಲಸ ಮಾಡಬಹುದು. ಪರಿಶೀಲನೆಯನ್ನು ಸುಗಮಗೊಳಿಸಲು Shopify ವ್ಯಾಪಾರಿಗಳು ಬಿಸಿನೆಸ್ ಹಬ್‌ನಿಂದ ಅಥವಾ Shopify ಆಡಳಿತ ವಿಭಾಗದಿಂದ ತಮ್ಮ ಸ್ಟೋರ್ ಅನ್ನು ಸಂಪರ್ಕಿಸಬಹುದು. Shopify ವ್ಯಾಪಾರಿಗಳ ಅರ್ಹ ಉತ್ಪನ್ನಗಳನ್ನು Shopify ಉತ್ಪನ್ನದ ಪಟ್ಟಿಯ ಮೂಲಕ ಈಗಾಗಲೇ ChatGPT ಯಲ್ಲಿ ಸಂಯೋಜಿಸಲಾಗಿದೆ.

ChatGPT ಯಲ್ಲಿ ಕಲರ್‌ಫುಲ್ ಕ್ಲ್ಯಾಟರ್‌ನ ಪರಿಚಯ ಪುಟವನ್ನು ಕ್ಲೇಮ್ ಮಾಡುವ ಸ್ಕ್ರೀನ್. ಇದರಲ್ಲಿ ಗ್ರಾಹಕರ ಸಂವಹನದ ಒಳನೋಟಗಳು, ಬಿಸಿನೆಸ್ ಮಾಹಿತಿ, ಬ್ಲೂ ಚೆಕ್‌ಮಾರ್ಕ್ ಮತ್ತು ಪರಿಚಯ ಪುಟವನ್ನು ಕ್ಲೇಮ್ ಮಾಡುವ ಬಟನ್ ಕಾಣಿಸುತ್ತವೆ.

ಜನರು ನಿಮ್ಮ ಬಿಸಿನೆಸ್‌ನೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ತಿಳಿಯಿರಿ

ChatGPT ಯಲ್ಲಿ ಜನರು ಒಂದು ಬಿಸಿನೆಸ್‌ನೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಬಗ್ಗೆ ಬಿಸಿನೆಸ್ ಹಬ್ ಒಟ್ಟುಗೂಡಿಸಿದ ಒಳನೋಟಗಳನ್ನು ಒದಗಿಸುತ್ತದೆ. ಬಿಸಿನೆಸ್ ಅನ್ನು ಎಷ್ಟು ಬಾರಿ ಉಲ್ಲೇಖಿಸಲಾಗಿದೆ ಮತ್ತು ಅದರ ವೆಬ್‌ಸೈಟ್‌ಗೆ ಎಷ್ಟು ಕ್ಲಿಕ್‌ಗಳು ಬಂದಿವೆ ಎಂಬ ಮಾಹಿತಿಯೂ ಇದರಲ್ಲಿ ಸೇರಿದೆ. ತಮ್ಮ ಬಿಸಿನೆಸ್ ಅನ್ನು ಹುಡುಕಲು ನೆರವಾದ ವಿಷಯಗಳನ್ನೂ ಸಂಸ್ಥೆಗಳು ಪರಿಶೀಲಿಸಬಹುದು. ಇವುಗಳು ತಮ್ಮ ವೆಬ್‌ಸೈಟ್ ಅನ್ನು ಉಲ್ಲೇಖಿಸಿರುವ ಸಂಭಾಷಣೆಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ವಿಷಯಗಳಾಗಿವೆ. ತಮ್ಮ ಬಿಸಿನೆಸ್ ಅನ್ನು ಹೇಗೆ ಬಿಂಬಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ತಾವು ಹಂಚಿಕೊಳ್ಳುವ ಮಾಹಿತಿಯನ್ನು ಸುಧಾರಿಸುವ ಅವಕಾಶಗಳನ್ನು ಗುರುತಿಸಲು ಈ ಒಳನೋಟಗಳು ಸಂಸ್ಥೆಗಳಿಗೆ ನೆರವಾಗುತ್ತವೆ.

ಬಳಕೆದಾರರ ಗೌಪ್ಯತೆಯನ್ನು ಕಾಪಾಡುವಂತೆ ನಾವು ಈ ಒಳನೋಟಗಳನ್ನು ವಿನ್ಯಾಸಗೊಳಿಸಿದ್ದೇವೆ. ಬಳಕೆದಾರರ ಸಂಭಾಷಣೆಗಳನ್ನಾಗಲಿ, ಬಿಸಿನೆಸ್ ಏಜೆಂಟ್‌ಗಳೊಂದಿಗೆ ಅವರು ನಡೆಸುವ ಮಾತುಕತೆಗಳನ್ನಾಗಲಿ ನಾವು ಬಿಸಿನೆಸ್‌ಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಒಳನೋಟಗಳನ್ನು ಒಟ್ಟುಗೂಡಿಸಲಾಗುತ್ತದೆ. ನಿಗದಿತ ಕನಿಷ್ಠ ಮಿತಿಗಳನ್ನು ಪೂರೈಸುವಷ್ಟು ಸಂಭಾಷಣೆಗಳು ಅಥವಾ ಸಂವಹನಗಳು ಇದ್ದಾಗ ಮಾತ್ರ ಅವುಗಳು ಲಭ್ಯವಾಗುತ್ತವೆ.

ಬಿಸಿನೆಸ್ ಉಲ್ಲೇಖಗಳು, ಪರಿಚಯ ಪುಟದ ವೀಕ್ಷಣೆಗಳು, ವೆಬ್ದ‌ಸೈಟ್ ಕ್ಲಿಕ್‌ಗಳು ಮತ್ತು ಬಿಸಿನೆಸ್ ಅನ್ನು ಅನ್ವೇಷಿಸಲು ನೆರವಾದ ಪ್ರಮುಖ ವಿಷಯಗಳನ್ನು ತೋರಿಸುವ ಬಿಸಿನೆಸ್ ಒಳನೋಟಗಳ ಫಲಕ.

ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಏಜೆಂಟಿಕ್ ಸಾಮರ್ಥ್ಯಗಳನ್ನು ವ್ಯಾಪಾರಗಳಿಗೆ ತರುವುದು

ChatGPT ಯಲ್ಲಿ ತಮ್ಮ ಬಿಸಿನೆಸ್ ಅನ್ನು ಕ್ಲೇಮ್ ಮಾಡಿದ ನಂತರ, ಅರ್ಹ ಸಂಸ್ಥೆಗಳು ಬಿಸಿನೆಸ್ ಏಜೆಂಟ್ ಅನ್ನು ನಿರ್ಮಿಸಿ, ಪರೀಕ್ಷಿಸಿ, ಬಳಕೆಗೆ ತರಬಹುದು. ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ತಮ್ಮ ಉತ್ಪನ್ನಗಳು ಹಾಗೂ ಸೇವೆಗಳನ್ನು ಅನ್ವೇಷಿಸಲು ಜನರಿಗೆ ನೆರವಾಗುವ ಹೊಸ ಮಾರ್ಗವಿದು.

ಮಾಡೆಲ್ ನೀಡುವ ಉತ್ತರದಲ್ಲಿ ಒಂದು ಬಿಸಿನೆಸ್ ಕಾಣಿಸಿಕೊಂಡಾಗ, ಜನರು ಅದರ ಮೇಲೆ ಕ್ಲಿಕ್ ಮಾಡಿ ಆ ಬಿಸಿನೆಸ್‌ನ ChatGPT ಪರಿಚಯದ ಪುಟವನ್ನು ನೋಡಬಹುದು. ಬಿಸಿನೆಸ್ ಏಜೆಂಟ್ ಲಭ್ಯವಿದ್ದರೆ, ಗ್ರಾಹಕರು ಆ ಬಿಸಿನೆಸ್‌ನ ಉತ್ಪನ್ನಗಳು ಮತ್ತು ಸೇವೆಗಳನ್ನು ಅನ್ವೇಷಿಸಲು ಹಾಗೂ ಮುಂದಿನ ಪ್ರಶ್ನೆಗಳನ್ನು ಕೇಳಲು ಅದರೊಂದಿಗೆ ಸಂಭಾಷಣೆಯನ್ನು ಆರಂಭಿಸಬಹುದು. ಉದಾಹರಣೆಗೆ, ಉತ್ಪನ್ನಗಳನ್ನು ಹೋಲಿಸುತ್ತಿರುವವರು ಎರಡು ಆಯ್ಕೆಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಮತ್ತು ಯಾವ ವೈಶಿಷ್ಟ್ಯಗಳು ತಮ್ಮ ಅಗತ್ಯಗಳಿಗೆ ಸರಿಹೊಂದುತ್ತವೆ ಎಂಬುದರ ಬಗ್ಗೆ ಕೇಳಬಹುದು. ಬಿಸಿನೆಸ್ ಮಾಹಿತಿಯನ್ನು ಬಳಸಿ ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಬಿಸಿನೆಸ್ ಏಜೆಂಟ್ ಅವರಿಗೆ ನೆರವಾಗಬಹುದು.

ChatGPT ಯಲ್ಲಿ ಕಲರ್‌ಫುಲ್ ಕ್ಲ್ಯಾಟರ್‌ನ ಪರಿಶೀಲಿತ ಬಿಸಿನೆಸ್ ಪರಿಚಯದ ಪುಟ. ಇದರಲ್ಲಿ ಉತ್ಪನ್ನಗಳು, ಬಿಸಿನೆಸ್ ವಿವರಗಳು ಮತ್ತು ಸಂಭಾಷಣೆ ಆರಂಭಿಸಲು ಅಥವಾ ಅದರ ವೆಬ್‌ಸೈಟ್‌ಗೆ ಭೇಟಿ ನೀಡಲು ಆಯ್ಕೆಗಳು ಕಾಣಿಸುತ್ತವೆ.

ಒಂದು ಉತ್ಪನ್ನ ಅಥವಾ ಸೇವೆ ತಮಗೆ ಸೂಕ್ತವೇ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಗ್ರಾಹಕರಿಗೆ ಸುಲಭವಾಗಬಹುದು. ಆಸಕ್ತ ಗ್ರಾಹಕರ ಅಗತ್ಯಗಳಿಗೆ ತಕ್ಕ ಸಂಭಾಷಣೆಯ ಮೂಲಕ ಅವರಿಗೆ ಹೆಚ್ಚಿನ ಮಾಹಿತಿ ನೀಡಲು ಇದು ಬಿಸಿನೆಸ್‌ಗಳಿಗೆ ಅವಕಾಶ ಮಾಡಿಕೊಡುತ್ತದೆ. ಬಿಸಿನೆಸ್ ಏಜೆಂಟ್‌ನೊಂದಿಗಿನ ಸಂಭಾಷಣೆಯನ್ನು ಸ್ಪಷ್ಟವಾಗಿ ಗುರುತಿಸಲಾಗುತ್ತದೆ. ಅದು ಗ್ರಾಹಕರ ಮೂಲ ChatGPT ಸಂಭಾಷಣೆಯಿಂದ ಪ್ರತ್ಯೇಕವಾಗಿರುತ್ತದೆ ಮತ್ತು ChatGPT ಸ್ವತಂತ್ರವಾಗಿ ನೀಡುವ ಉತ್ತರಗಳಿಂದ ಭಿನ್ನವಾಗಿರುತ್ತದೆ.

ಹೆಚ್ಚಿನ ಸಂಭಾವ್ಯ ಗ್ರಾಹಕರನ್ನು ತಲುಪಲು ಸಂಸ್ಥೆಗಳು ತಮ್ಮ ಬಿಸಿನೆಸ್ ಏಜೆಂಟ್ ಅನ್ನು ಪ್ರಾಯೋಜಿಸಬಹುದು⁠ ಮತ್ತು ChatGPT ಜಾಹೀರಾತುಗಳು ಗ್ರಾಹಕರನ್ನು ಆ ಏಜೆಂಟ್‌ನ ಬಳಿಗೆ ಕರೆದೊಯ್ಯುವಂತೆ ಮಾಡಬಹುದು. ಪ್ರಾಯೋಜಿತ ಪ್ರದರ್ಶನಗಳನ್ನು ಸ್ಪಷ್ಟವಾಗಿ ಗುರುತಿಸಲಾಗುತ್ತದೆ ಮತ್ತು ಅವುಗಳು ChatGPT ಉತ್ತರಗಳಿಂದ ಪ್ರತ್ಯೇಕವಾಗಿರುತ್ತವೆ.

ಬಿಸಿನೆಸ್ ಏಜೆಂಟ್‌ಗಳು ಈಗ ಅಮೆರಿಕದ ಅರ್ಹ ಇ-ಕಾಮರ್ಸ್ ಮತ್ತು ಆನ್‌ಲೈನ್ ಸೇವಾ ಬಿಸಿನೆಸ್‌ಗಳಿಗೆ ಲಭ್ಯವಿದ್ದಾರೆ. ಅರ್ಹ ವರ್ಗಗಳ ಬಗ್ಗೆ ಇಲ್ಲಿ⁠ ಇನ್ನಷ್ಟು ತಿಳಿಯಿರಿ.

ಕಲರ್‌ಫುಲ್ ಕ್ಲ್ಯಾಟರ್‌ನ ಬಿಸಿನೆಸ್ ಏಜೆಂಟ್ ಗ್ರಾಹಕರ ಉಡುಗೊರೆ ಕುರಿತ ಪ್ರಶ್ನೆಗೆ ಉತ್ಪನ್ನಗಳನ್ನು ಶಿಫಾರಸು ಮಾಡುವ ಮೂಲಕ ಉತ್ತರಿಸುತ್ತದೆ.

ChatGPT ಯಲ್ಲಿ ಬಿಸಿನೆಸ್‌ಗಳಿಗೆ ನೆಲೆ ನಿರ್ಮಿಸುವುದು

ಉತ್ಪನ್ನಗಳನ್ನು ಅನ್ವೇಷಿಸಲು, ಆಯ್ಕೆಗಳನ್ನು ಹೋಲಿಸಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರು AI ಅನ್ನು ಬಳಸುತ್ತಿರುವ ಈ ಸಂದರ್ಭದಲ್ಲಿ, AI ಮೂಲಕ ಜನರು ಮತ್ತು ಬಿಸಿನೆಸ್‌ಗಳನ್ನು ಸಂಪರ್ಕಿಸುವ ಪ್ಲ್ಯಾಟ್‌ಫಾರ್ಮ್ ಆಗಿ ChatGPT ಬೆಳೆದಿದೆ. ಬಿಸಿನೆಸ್‌ಗಳನ್ನು ChatGPT ಯೊಂದಿಗೆ ಇನ್ನಷ್ಟು ಆಳವಾಗಿ ಬೆಸೆಯುವ ನಿಟ್ಟಿನಲ್ಲಿ ಇಂದಿನ ಪ್ರಕಟಣೆ ಒಂದು ಆರಂಭಿಕ ಹೆಜ್ಜೆಯಾಗಿದೆ. ನಾವು ಮೂಲಭೂತ ಅಂಶಗಳಿಂದ ಆರಂಭಿಸುತ್ತಿದ್ದೇವೆ: ಬಿಸಿನೆಸ್‌ಗಳ ಬಗ್ಗೆ ನಿಖರ ಮಾಹಿತಿ, ಉಪಯುಕ್ತ ಒಳನೋಟಗಳು ಮತ್ತು ಜನರು ಮಾಹಿತಿ ಆಧರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುವ ಸಂಭಾಷಣೆಗಳು. ಮುಂದಿನ ದಿನಗಳಲ್ಲಿ, ‘ChatGPT ಯಲ್ಲಿ ಬಿಸಿನೆಸ್‌ಗಳು’ ಸೌಲಭ್ಯ ಮತ್ತು ಬಿಸಿನೆಸ್ ಏಜೆಂಟ್ ಅನ್ನು ಇನ್ನಷ್ಟು ಮಾರುಕಟ್ಟೆಗಳು ಹಾಗೂ ಬಿಸಿನೆಸ್ ವರ್ಗಗಳಿಗೆ ವಿಸ್ತರಿಸಲು ಮತ್ತು ಹೆಚ್ಚು ಸಂಕೀರ್ಣ ಅಗತ್ಯಗಳಿರುವ ಸಂಸ್ಥೆಗಳಿಗಾಗಿ ಪರಿಕರಗಳನ್ನು ನಿರ್ಮಿಸಲು ಯೋಜಿಸಿದ್ದೇವೆ.

ಪ್ಲ್ಯಾಟ್‌ರ್ಮ್ ಬೆಳೆಯುತ್ತಾ ಹೋದಂತೆ, ChatGPT ಯಲ್ಲಿ ಮತ್ತು ಅದರಾಚೆಗೂ ಬಿಸಿನೆಸ್‌ಗಳು ಗ್ರಾಹಕರೊಂದಿಗೆ ನೇರವಾಗಿ ಅಥವಾ ಏಜೆಂಟ್ ಮೂಲಕ ಸಂಪರ್ಕ ಸಾಧಿಸಲು ಇನ್ನಷ್ಟು ಮಾರ್ಗಗಳನ್ನು ಅನ್ವೇಷಿಸುತ್ತೇವೆ. ನಿರ್ಧಾರಗಳನ್ನು ತೆಗೆದುಕೊಳ್ಳುವ ಜನರಿಗೆ ChatGPT ಯನ್ನು ಇನ್ನಷ್ಟು ಉಪಯುಕ್ತವಾಗಿಸುವುದು ಮತ್ತು ಬಿಸಿನೆಸ್‌ಗಳಿಗೆ ಭಾಗವಹಿಸಲು ಹಾಗೂ ಬೆಳೆಯಲು ಹೊಸ ಮಾರ್ಗಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ.

ಲೇಖಕರು

OpenAI