ಪ್ರೇಮ ವಂಚನೆಗಳು: ಕೃತಕ ಬುದ್ಧಿಮತ್ತೆ ನೆರವಿನ ಪ್ರೇಮ ವಂಚನೆಯ ಕಾರ್ಯವಿಧಾನಗಳು
ಸಂಪರ್ಕ, ಅನುವಾದ, ಸಂತ್ರಸ್ತರೊಂದಿಗೆ ಸಂವಹನ ಮತ್ತು ಹೂಡಿಕೆ ವಂಚನೆಯ ಆಮಿಷಗಳಿಗಾಗಿ ಕೃತಕ ಬುದ್ಧಿಮತ್ತೆ ಬಳಸಿ ಪ್ರೇಮ ವಂಚನೆಗೆ ನೆರವಾಗುತ್ತಿದ್ದ ಖಾತೆಗಳನ್ನು OpenAI ನಿಷೇಧಿಸಿತು.
ಈ ಪ್ರಕರಣ ಅಧ್ಯಯನವು ಮೂಲತಃ OpenAI ಪ್ರಕಟಿಸಿದ ಫೆಬ್ರವರಿ 2026ರ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಕೃತಕ ಬುದ್ಧಿಮತ್ತೆಯ ದುರುದ್ದೇಶಪೂರಿತ ಬಳಕೆಯನ್ನು ತಡೆಯುವ ಕುರಿತ ವರದಿಯಲ್ಲಿ ಪ್ರಕಟವಾಗಿತ್ತು.
ನಮ್ಮ ಮಾಡೆಲ್‌ಗಳನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ ವಂಚನಾ ಜಾಲಗಳನ್ನು ನಾವು ತಡೆದ ಬಗ್ಗೆ ಒಂದು ವರ್ಷದ ಹಿಂದೆ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ವರದಿ ಮಾಡಲು ಆರಂಭಿಸಿದಾಗಿನಿಂದ, ವಿಶ್ವದ ವಿವಿಧ ಭಾಗಗಳ ಹಲವು ವಂಚನಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದೇವೆ. ಇವುಗಳಲ್ಲಿ “ಕೆಲಸ” ವಂಚನೆಗಳೂ ಸೇರಿದ್ದವು. ಇಂತಹ ವಂಚನೆಗಳಲ್ಲಿ, ಸಣ್ಣಪುಟ್ಟ ಕೆಲಸಗಳಿಂದ ಗಳಿಸಿದ್ದೇವೆಂದು ಸಂತ್ರಸ್ತರು ಭಾವಿಸುವ, ವಾಸ್ತವದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಗಳಿಕೆಯನ್ನು ಪಡೆಯಲು ಹಣ ಪಾವತಿಸುವಂತೆ ಅವರನ್ನು ನಂಬಿಸಲಾಗುತ್ತದೆ. ಹಾಗೆಯೇ, ಅಸ್ತಿತ್ವದಲ್ಲಿಲ್ಲದ ಹೂಡಿಕೆ ಕಂಪನಿಗಳಲ್ಲಿ ಹಣ ತೊಡಗಿಸುವಂತೆ ನಂಬಿಸಿ ಮೋಸಗೊಳಿಸುವ ಹೂಡಿಕೆ ವಂಚನೆಗಳೂ ಸೇರಿದ್ದವು.
ಕೃತಕ ಬುದ್ಧಿಮತ್ತೆ ಬರುವ ಬಹಳ ಹಿಂದಿನಿಂದಲೂ ಸಾಮಾನ್ಯವಾಗಿರುವ ಒಂದು ವಿಧವೆಂದರೆ ಪ್ರೇಮ ವಂಚನೆ. ಇದರಲ್ಲಿ ವಂಚಕರು ಪ್ರೇಮ ಸಂಗಾತಿಯಾಗಲು ಬಯಸುವವರಂತೆ ನಟಿಸಿ, ತಾವು ಗುರಿಯಾಗಿಸಿಕೊಂಡ ವ್ಯಕ್ತಿಗೆ ಸೂಕ್ತ ಪ್ರೇಮ ಸಂಗಾತಿ ಸಿಕ್ಕಿದ್ದಾರೆಂದು ನಂಬಿಸಲು ಯತ್ನಿಸುತ್ತಾರೆ. ಬಳಿಕ ಅವರಿಂದ ಹೆಚ್ಚು ಹೆಚ್ಚು ಹಣ ಕೇಳತೊಡಗುತ್ತಾರೆ. ವಂಚನೆಯನ್ನು ತಡೆದ ಬಗ್ಗೆ ನಾವು ಪ್ರಕಟಿಸಿದ ಮೊದಲ ವರದಿಯು ಕಾಂಬೋಡಿಯಾದಲ್ಲಿ ಹೊಸದಾಗಿ ಆರಂಭವಾಗಿದ್ದ ಅಪರಾಧ ಕಾರ್ಯಾಚರಣೆಯ ಕುರಿತಾಗಿತ್ತು. ಅದು ಪ್ರೇಮ ವಂಚನೆಗಾಗಿ ಸಂದೇಶಗಳನ್ನು ರಚಿಸಲು ChatGPT ಬಳಸಿತ್ತು; ಅವುಗಳಲ್ಲಿ ಕೆಲವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗಿತ್ತು. ಅಂದಿನಿಂದ ನಾವು ವಿವಿಧ ಪ್ರೇಮ ವಂಚನೆ ಯತ್ನಗಳನ್ನು ತಡೆದಿದ್ದೇವೆ. ಜೂನ್‌ನಲ್ಲಿ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ನಾವು ಬರೆದಂತೆ, ಇವು ಮತ್ತು ಇತರ ವಂಚನೆಗಳು ಕೃತಕ ಬುದ್ಧಿಮತ್ತೆಯ ಬಳಕೆಯಲ್ಲಿ ಸಾಮಾನ್ಯವಾಗಿ ಒಂದೇ ಮಾದರಿಯನ್ನು ಅನುಸರಿಸುತ್ತವೆ. ಇದನ್ನು ನಾವು ಮೊದಲ ಸಂಪರ್ಕ (ಪರಿಚಯವಿಲ್ಲದೆ ಸಂಪರ್ಕಿಸುವುದು), ಭಾವೋದ್ರೇಕ (ಭಾವನೆಗಳನ್ನು ಹುಟ್ಟಿಸುವುದು) ಮತ್ತು ಹಣ ಸುಲಿಗೆ (ಹಣ ಕೀಳುವುದು) ಎಂಬ ಹಂತಗಳಾಗಿ ಪರಿಗಣಿಸುತ್ತೇವೆ.
ಮೊದಲ ಸಂಪರ್ಕ (ಪರಿಚಯವಿಲ್ಲದೆ ಸಂಪರ್ಕಿಸುವುದು): ಗುರಿಯಾಗಿಸಬಹುದಾದ ವ್ಯಕ್ತಿಯ ಆಸಕ್ತಿಗಳಿಗೆ ಹೊಂದುವ ಮೂಲಕ ಅವರ ಗಮನ ಸೆಳೆಯಲು ವಂಚಕರು ವಿಷಯವನ್ನು ರಚಿಸುತ್ತಾರೆ. ಉದಾಹರಣೆಗೆ, ಕಳೆದ ವರ್ಷ ನಾವು ವರದಿ ಮಾಡಿದ “ಹಂದಿ ವಧೆ” ವಂಚನೆಯು ವೈದ್ಯಕೀಯ ವೃತ್ತಿಯಲ್ಲಿರುವ, 40ರಿಂದ 49 ವರ್ಷದ ಅಮೆರಿಕನ್ ಪುರುಷರನ್ನು ಆಗಾಗ್ಗೆ ಗುರಿಯಾಗಿಸುತ್ತಿತ್ತು. ಅವರು ಗಾಲ್ಫ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವ ಮೂಲಕ ಸಂಪರ್ಕಿಸುತ್ತಿತ್ತು. ಇತರ ಕಾರ್ಯಾಚರಣೆಗಳು ಪರಿಚಯವಿಲ್ಲದವರಿಗೆ ಕಿರುಸಂದೇಶಗಳನ್ನು ಕಳುಹಿಸುವುದು, ನಕಲಿ ನೇಮಕಾತಿ ಸಂದೇಶಗಳನ್ನು ಕಳುಹಿಸುವುದು ಅಥವಾ ನಮ್ಮ ಇತ್ತೀಚಿನ ಪ್ರೇಮ ವಂಚನೆ ಪ್ರಕರಣದಲ್ಲಿದ್ದಂತೆ (ಕೆಳಗೆ ವಿವರಿಸಲಾಗಿದೆ) ಸಾಮಾಜಿಕ ಮಾಧ್ಯಮ ಜಾಹೀರಾತುಗಳನ್ನು ಬಳಸುವುದು ಮುಂತಾದ ವಿಧಾನಗಳನ್ನು ಅನುಸರಿಸಿದ್ದವು. ಪ್ರತಿಯೊಂದು ಪ್ರಕರಣದಲ್ಲೂ ದುರುದ್ದೇಶಪೂರಿತ ವ್ಯಕ್ತಿಗಳು ChatGPT ಬಳಸಿ, ಸಾಂಪ್ರದಾಯಿಕ ವಂಚನಾ ಸಂದೇಶಗಳಿಗಿಂತ ಹೆಚ್ಚು ಆಕರ್ಷಕವಾಗಿರಬಹುದಾದ ಮತ್ತು ಸ್ಥಳೀಯ ಭಾಷಿಕರಲ್ಲದವರು ಬರೆದದ್ದು ಎಂಬುದು ಸುಲಭವಾಗಿ ಗೊತ್ತಾಗದಂತಹ ಸಂದೇಶಗಳನ್ನು ರಚಿಸಿದ್ದರು.

2025ರಲ್ಲಿ ನಾವು ವರದಿ ಮಾಡಿದ “ಹಂದಿ ವಧೆ” ವಂಚನಾ ಜಾಲವು, ತನ್ನ ಕಾರ್ಯಾಚರಣೆಗೆ ಸಂಬಂಧವಿಲ್ಲದ ಬಳಕೆದಾರರ ಫೇಸ್‌ಬುಕ್ ಪೋಸ್ಟ್‌ಗೆ ಗಾಲ್ಫ್ ವಿಷಯವಾಗಿ ಪ್ರತಿಕ್ರಿಯಿಸಿ ಸಂಪರ್ಕಿಸಲು ಯತ್ನಿಸಿದ ಸಂದೇಶ.
ಭಾವೋದ್ರೇಕ (ಭಾವನೆಗಳನ್ನು ಹುಟ್ಟಿಸುವುದು): ಗುರಿಯಾದ ವ್ಯಕ್ತಿಯಲ್ಲಿ ತೀವ್ರ ಭಾವನೆಗಳನ್ನು ಹುಟ್ಟಿಸಿ, ಅವರನ್ನು ತಮ್ಮ ಇಚ್ಛೆಯಂತೆ ನಡೆಸಿಕೊಳ್ಳಲು ಸುಲಭವಾಗುವಂತೆ ವಂಚಕರು ವಿಷಯವನ್ನು ರಚಿಸುತ್ತಾರೆ. ಪ್ರೇಮ ವಂಚನೆಗಳಲ್ಲಿ, ಗುರಿಯಾದ ವ್ಯಕ್ತಿಗೆ ವಂಚಕರತ್ತ ಆಕರ್ಷಣೆ ಉಂಟುಮಾಡಲು ಪ್ರಯತ್ನಿಸಲಾಗುತ್ತದೆ. ಇತರ ವಂಚನೆಗಳಲ್ಲಿ, ಲಾಭದಾಯಕವಾಗಬಹುದಾದ ವ್ಯವಹಾರದ ಬಗ್ಗೆ ಉತ್ಸಾಹ ಹುಟ್ಟಿಸುವುದು, ಅವಕಾಶ ತಪ್ಪಿಹೋಗುವ ಭಯ ಮೂಡಿಸುವುದು ಅಥವಾ ಕಾನೂನು ಅಪಾಯ ಇಲ್ಲವೇ ಬಾಕಿ ಬಿಲ್ ಇದೆ ಎಂದು ಹೇಳಿ ಆತಂಕಗೊಳಿಸುವುದು ಮುಂತಾದ ಪ್ರಯತ್ನಗಳು ಇರಬಹುದು. ಕೆಲವೊಮ್ಮೆ ಮೊದಲ ಸಂಪರ್ಕದ ಸಂದೇಶದಲ್ಲೇ ಭಾವೋದ್ರೇಕ ಹುಟ್ಟಿಸುವ ಅಂಶವೂ ಇರಬಹುದು.

ಜೂನ್ 2025ರಲ್ಲಿ ನಾವು ಬಯಲಿಗೆಳೆದ “ತಪ್ಪು ಸಂಖ್ಯೆ” ವಂಚನಾ ಕಾರ್ಯಾಚರಣೆಯು ಪರಿಚಯವಿಲ್ಲದವರಿಗೆ ಕಳುಹಿಸಿದ ಕಿರುಸಂದೇಶ. ಅಲ್ಪ ಕೆಲಸಕ್ಕೆ ನಂಬಲಸಾಧ್ಯವಾದಷ್ಟು ಹೆಚ್ಚಿನ ಗಳಿಕೆಯ ವಿವರಗಳನ್ನು ಇದು ಒಳಗೊಂಡಿದೆ. ಬಹುಶಃ “ಭಾವೋದ್ರೇಕ” ಉಂಟುಮಾಡಲೆಂದೇ ಇದನ್ನು ರೂಪಿಸಿರಬಹುದು.
ಹಣ ಸುಲಿಗೆ (ಹಣ ಕೀಳುವುದು): ಗುರಿಯಾದ ವ್ಯಕ್ತಿ ಹಣ ನೀಡುವಂತೆ ಮನವೊಲಿಸಲು ವಂಚಕರು ವಿಷಯವನ್ನು ರಚಿಸುತ್ತಾರೆ. ಇದಕ್ಕಾಗಿ ನೀಡುವ ಕಾರಣಗಳು ಬಹಳ ವೈವಿಧ್ಯಮಯವಾಗಿರಬಹುದು. ಉದಾಹರಣೆಗೆ, ಪ್ರೇಮ ವಂಚನೆಗಳಲ್ಲಿ ತಮ್ಮ ಪ್ರೇಮ ಸಂಗಾತಿಯ ವ್ಯವಹಾರದಲ್ಲಿ ಹೂಡಿಕೆ ಮಾಡುವಂತೆ ಅಥವಾ ಆರ್ಥಿಕ ಸಂಕಷ್ಟದಿಂದ ಪಾರುಮಾಡಲು ಹಣ ನೀಡುವಂತೆ ಗುರಿಯಾದ ವ್ಯಕ್ತಿಯನ್ನು ಕೇಳಬಹುದು. “ಕೆಲಸ” ವಂಚನೆಗಳಲ್ಲಿ, ತಾವು ಗಳಿಸಿದ್ದೇವೆಂದು ನಂಬಿರುವ (ಕಾಲ್ಪನಿಕ) ಹಣವನ್ನು ಪಡೆಯಲು ಮೊದಲು ಹಣ ಪಾವತಿಸಬೇಕೆಂದು ಗುರಿಯಾದ ವ್ಯಕ್ತಿಗಳಿಗೆ ಹೇಳಲಾಗುತ್ತದೆ. ಹೂಡಿಕೆ ವಂಚನೆಗಳಲ್ಲಿ, ಅಸ್ತಿತ್ವದಲ್ಲೇ ಇಲ್ಲದ ಹೂಡಿಕೆಗಳಲ್ಲಿ ಹಣ ತೊಡಗಿಸುವಂತೆ ಗುರಿಯಾದ ವ್ಯಕ್ತಿಗಳಿಗೆ ಹೇಳಲಾಗುತ್ತದೆ.

ಜೂನ್ 2025ರಲ್ಲಿ ನಾವು ಬಯಲಿಗೆಳೆದ “ತಪ್ಪು ಸಂಖ್ಯೆ” ವಂಚನಾ ಕಾರ್ಯಾಚರಣೆಯು ಪರಿಚಯವಿಲ್ಲದವರಿಗೆ ಕಳುಹಿಸಿದ ಕಿರುಸಂದೇಶ. ಅಲ್ಪ ಕೆಲಸಕ್ಕೆ ನಂಬಲಸಾಧ್ಯವಾದಷ್ಟು ಹೆಚ್ಚಿನ ಗಳಿಕೆಯ ವಿವರಗಳನ್ನು ಇದು ಒಳಗೊಂಡಿದೆ. ಬಹುಶಃ “ಭಾವೋದ್ರೇಕ” ಉಂಟುಮಾಡಲೆಂದೇ ಇದನ್ನು ರೂಪಿಸಿರಬಹುದು.
ಈ ಪ್ರಕ್ರಿಯೆ ಸೂಚಿಸುವಂತೆ, ಸಂದೇಶಗಳನ್ನು ತಲುಪಿಸುವ ಜಾಲವು ವಂಚನೆಗಳ ಅತ್ಯಗತ್ಯ ಭಾಗವಾಗಿದೆ. ನಾವು ಬಯಲಿಗೆಳೆದ ವಿವಿಧ ವಂಚನಾ ಕಾರ್ಯಾಚರಣೆಗಳು ಕಿರುಸಂದೇಶಗಳು, ಗೂಢಲಿಪೀಕೃತ ಸಂದೇಶ ವಿನಿಮಯ ಆ್ಯಪ್‌ಗಳು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು, ಆನ್‌ಲೈನ್ ಜಾಹೀರಾತುಗಳು ಅಥವಾ ಇವೆಲ್ಲವನ್ನೂ ಬಳಸಿ ತಮ್ಮ ಮೊದಲ ಸಂಪರ್ಕದ ಸಂದೇಶಗಳನ್ನು ಕಳುಹಿಸಿದ್ದವು. ಕೃತಕ ಬುದ್ಧಿಮತ್ತೆಗೂ ಹಿಂದಿನ ಕಾಲದ ವಂಚನೆಗಳು ಇಮೇಲ್‌ಗಳು(ಹೊಸ ಕಿಟಕಿಯಲ್ಲಿ ತೆರೆಯುತ್ತದೆ), ದೂರವಾಣಿ ಕರೆಗಳು(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ಪತ್ರಗಳು(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಹಾಗೂ ತಂತಿ ಸಂದೇಶಗಳನ್ನೂ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಬಳಸಿದ್ದಕ್ಕೆ ಕುಖ್ಯಾತವಾಗಿವೆ. ಅನೇಕ ವಂಚನೆಗಳಲ್ಲಿ ನಿರ್ದಿಷ್ಟ ಗುರಿಯಿಲ್ಲದೆ ವ್ಯಾಪಕವಾಗಿ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಆದರೆ ಕೆಲವು ವಂಚನೆಗಳಲ್ಲಿ ನಿಖರವಾಗಿ ಆಯ್ದ ವ್ಯಕ್ತಿಗಳನ್ನು ಗುರಿಯಾಗಿಸಲು ಪ್ರಯತ್ನಿಸುವುದು ಕಂಡುಬರುತ್ತದೆ. ಉದಾಹರಣೆಗೆ, ಫೆಬ್ರವರಿ 2025ರಲ್ಲಿ ನಾವು ವರದಿ ಮಾಡಿದ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) “ಹಂದಿ ವಧೆ” ವಂಚನೆಯು ಗಾಲ್ಫ್‌ನಂತಹ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿತ್ತು. ಮತ್ತೊಂದು ಪ್ರೇಮ ವಂಚನೆ ಇಂಡೊನೇಷ್ಯಾದ ಯುವಕರನ್ನು ಗುರಿಯಾಗಿಸಲು ಸಾಮಾಜಿಕ ಮಾಧ್ಯಮ ಜಾಹೀರಾತುಗಳನ್ನು ಬಳಸಿತ್ತು. ಹಾಗೆಯೇ, ಸೆಲೆಬ್ರಿಟಿ ವಂಚನೆಗಳಲ್ಲಿ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಯಂತೆ ನಟಿಸಿ, ಆ ವ್ಯಕ್ತಿಯ ಅಭಿಮಾನಿ ಗುಂಪುಗಳನ್ನು ಗುರಿಯಾಗಿಸಲಾಗುತ್ತದೆ. ಸಾಕ್ಷ್ಯಗಳು ತುಣುಕು ತುಣುಕಾಗಿ ಲಭ್ಯವಿರುವುದರಿಂದ, ನಾವು ತಡೆದ ವಿವಿಧ ವಂಚನೆಗಳನ್ನು ವಿಶ್ವಾಸಾರ್ಹವಾಗಿ ಹೋಲಿಸುವುದು ಕಷ್ಟ. ಆದರೂ, ವಂಚನಾ ಕಾರ್ಯಾಚರಣೆಯು ವಿವಿಧ ಕೆಲಸಗಳಿಗೆ ಕೃತಕ ಬುದ್ಧಿಮತ್ತೆಯನ್ನು ಎಷ್ಟೇ ಬಳಸಿರಲಿ, ಅದು ಆಯ್ಕೆಮಾಡುವ ಸಂದೇಶ ವಿತರಣಾ ವಿಧಾನವು (ಉದಾಹರಣೆಗೆ, ನಿರ್ದಿಷ್ಟ ಗುರಿಯಿಲ್ಲದೆ ವ್ಯಾಪಕವಾಗಿ ಕಳುಹಿಸುವುದು ಅಥವಾ ಆಯ್ದವರನ್ನೇ ಗುರಿಯಾಗಿಸುವುದು) ತನ್ನ ಗುರಿಗಳನ್ನು ಯಶಸ್ವಿಯಾಗಿ ತಲುಪಿ ಶೋಷಿಸುವ ಸಾಮರ್ಥ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ನಮ್ಮ ಅಂದಾಜು.


