ಮುಖ್ಯ ವಿಷಯಕ್ಕೆ ನೇರವಾಗಿ ಹೋಗಿ
OpenAI

ChatGPT ಮೂಲಕ ಸಣ್ಣ ವ್ಯಾಪಾರವನ್ನು ದೊಡ್ಡದಾಗಿ ಬೆಳೆಸುವುದು

ಡೆರೆಕ್ ಮತ್ತು ಲರಿಸಾ ಗೆಟರ್ ತಮ್ಮ ಸಣ್ಣ ವ್ಯಾಪಾರವನ್ನು ಬೃಹತ್ ಮನರಂಜನಾ ಸಂಸ್ಥೆಯಾಗಿ ಬೆಳೆಸಲು ChatGPT ಬಳಸುತ್ತಿದ್ದಾರೆ.

ಮೋಡ ಕವಿದ ಆಕಾಶದ ಹಿನ್ನೆಲೆಯಲ್ಲಿ ಎಟಿವಿ ಬಿಗ್ ಏರ್ ಟೂರ್ ಸವಾರರೊಬ್ಬರು ಗಾಳಿಯಲ್ಲಿ ಸಾಹಸ ಪ್ರದರ್ಶಿಸುತ್ತಿದ್ದಾರೆ.
“ಹಲವು ವರ್ಷಗಳಿಂದ ನಾವು ದೊಡ್ಡ ಕನಸುಗಳನ್ನು ಕಂಡಿದ್ದೇವೆ. ChatGPT ಬರುವ ಮೊದಲು ಅವು ಕಾರ್ಯಸಾಧ್ಯವೆಂದು ನನಗೆ ಅನಿಸಿರಲಿಲ್ಲ. ಈಗ ಎಲ್ಲವೂ ಸಾಧ್ಯವೆನಿಸುತ್ತದೆ.”
—ಲರಿಸಾ ಗೆಟರ್, ಎಟಿವಿ ಬಿಗ್ ಏರ್ ಟೂರ್

ಬಿಗ್ ಏರ್ ನಿರ್ಮಾಣ

ಹನ್ನೊಂದು ವರ್ಷಗಳ ಹಿಂದೆ ಡೆರೆಕ್ ಮತ್ತು ಲರಿಸಾ ಗೆಟರ್ ಸಂಚಾರಿ ಎಟಿವಿ ಸಾಹಸ ಪ್ರದರ್ಶನವಾದ ಎಟಿವಿ ಬಿಗ್ ಏರ್ ಟೂರ್ ಅನ್ನು ಆರಂಭಿಸಿದರು. ಅವರು ಸಣ್ಣ ಪ್ರಾದೇಶಿಕ ತಂಡವಾಗಿ ಆರಂಭಿಸಿದರೂ, ಶೀಘ್ರದಲ್ಲೇ ದೇಶದ ಅತ್ಯಂತ ಯಶಸ್ವಿ ಮೋಟಾರು ಕ್ರೀಡಾ ಪ್ರವಾಸಗಳಲ್ಲಿ ಒಂದಾಗಿ ಬೆಳೆದರು.

ಅವರು ವ್ಯವಹಾರವನ್ನು ಮತ್ತಷ್ಟು ಬೆಳೆಸಲು ಬಯಸಿದ್ದರು. ಆದರೆ ಮಾಡಬೇಕಾದ ಕೆಲಸಗಳು ಅಪಾರವಾಗಿದ್ದು, ಅವನ್ನು ನಿಭಾಯಿಸಲು ಸಾಕಷ್ಟು ಜನರಿಲ್ಲದಿರುವುದೇ ಅವರ ದೊಡ್ಡ ಸವಾಲಾಗಿತ್ತು. ಮೂವರು ಪುಟ್ಟ ಹೆಣ್ಣುಮಕ್ಕಳನ್ನು ಬೆಳೆಸುತ್ತಲೇ, ಅವರು ಪ್ರದರ್ಶನದ ವ್ಯವಸ್ಥಾಪನಾ ಕೆಲಸಗಳನ್ನೂ ಸಣ್ಣ ವ್ಯಾಪಾರ ನಡೆಸುವ ಆಡಳಿತಾತ್ಮಕ ಕೆಲಸಗಳನ್ನೂ ಒಟ್ಟಿಗೆ ನಿಭಾಯಿಸುತ್ತಿದ್ದರು. ಹೆಚ್ಚಿನ ಪ್ರದರ್ಶನದ ದಿನಗಳಲ್ಲಿ ಕೆಲಸ ಮುಗಿಸಲು ಅವರು ನಸುಕಿನ 3 ಗಂಟೆಯವರೆಗೂ ದುಡಿಯುತ್ತಿದ್ದರು.

ಟೂರ್‌ಗೆ ಹೊಸ ವೇಗ

ಡೆರೆಕ್ ಮತ್ತು ಲರಿಸಾ 2023ರಲ್ಲಿ ChatGPT ಬಗ್ಗೆ ತಿಳಿದುಕೊಂಡರು. ಅದಾದ ಕೆಲವೇ ದಿನಗಳಲ್ಲಿ ತಮ್ಮ ಇಡೀ ವ್ಯವಹಾರದಲ್ಲಿ ಅದನ್ನು ಬಳಸಲು ಆರಂಭಿಸಿದರು. ಈಗ ಅವರು ಮಾರುಕಟ್ಟೆ ಯೋಜನೆಗಳು, ಸಾಮಾಜಿಕ ಮಾಧ್ಯಮದ ಕಾರ್ಯತಂತ್ರಗಳು ಮತ್ತು ಗ್ರಾಹಕ ವರದಿಗಳ ಜೊತೆಗೆ ಪ್ರವಾಸದ ವೇಳಾಪಟ್ಟಿಗಳು ಹಾಗೂ ಉಪಕರಣಗಳ ದಾಸ್ತಾನು ವರದಿಗಳನ್ನು ಸಿದ್ಧಪಡಿಸಲು ChatGPT ಬಳಸುತ್ತಾರೆ.

ಪ್ರದರ್ಶನದ ದಿನಗಳಲ್ಲಿ ಸ್ಥಳದಲ್ಲಿಯೂ ಅವರು ChatGPT ಬಳಸುತ್ತಾರೆ. ಸ್ಪೀಕರ್‌ಗಳು ಮತ್ತು ವೇದಿಕೆಯನ್ನು ಸಿದ್ಧಪಡಿಸಲು ಅವರು ಅದನ್ನು ಧ್ವನಿ ತಂತ್ರಜ್ಞನಂತೆ, ಉಪಕರಣಗಳ ಸಮಸ್ಯೆಗಳನ್ನು ಪರಿಹರಿಸಲು ಮೆಕ್ಯಾನಿಕ್‌ನಂತೆ ಬಳಸುತ್ತಾರೆ. ಸ್ಥಳೀಯ ಪ್ರೇಕ್ಷಕರೊಂದಿಗೆ ಉತ್ತಮ ನಂಟು ಬೆಳೆಸಲು ಪ್ರತಿ ಪ್ರದರ್ಶನಕ್ಕೂ ವಿಶಿಷ್ಟ ನಿರೂಪಣಾ ಪಠ್ಯಗಳನ್ನು ರಚಿಸಲು ChatGPT ಡೆರೆಕ್‌ಗೆ ನೆರವಾಗುತ್ತದೆ. ಉಚಿತ ಕೊಡುಗೆಗಳು ಮತ್ತು ಮಾರಾಟದ ಸರಕುಗಳ ಲೆಕ್ಕವಿಡಲು ಲರಿಸಾಗೂ ಸಹಾಯ ಮಾಡುತ್ತದೆ.

“ChatGPT ಕೆಲಸಗಳನ್ನು ಸರಳಗೊಳಿಸುತ್ತಿದೆ. ಸಾಮಾನ್ಯವಾಗಿ ಎರಡು ವಾರ ಬೇಕಾಗುವ ಕೆಲಸವನ್ನು ನಾವು ಒಂದೇ ಬೆಳಿಗ್ಗೆಯಲ್ಲಿ ಮುಗಿಸಿದ್ದೇವೆ.”
—ಡೆರೆಕ್ ಗೆಟರ್, ಎಟಿವಿ ಬಿಗ್ ಏರ್ ಟೂರ್

ಧ್ವನಿ ಎಂಜಿನಿಯರಿಂಗ್

Show me the best way to set up my speakers onstage for a 250 ft wide covered grandstand.

Split the grandstand into three coverage zones: left, center, and right.

Diagram showing a three-zone speaker setup for a 250-foot-wide grandstand.
  • Place one PS18 sub and one PS15 top about 20 feet left of center.

  • Place a second PS18 and PS15 stack at center.

  • Place the third PS18 and PS15 stack about 20 feet right of center.

  • Aim the center top straight ahead and angle the outside tops slightly outward to cover the left and right seating zones.

  • Use the fourth PS15 as a stage monitor or extra side fill if one outer section needs more coverage.

This should give you even coverage across the roughly 250-foot-wide grandstand while minimizing gaps between zones.

ಗ್ರಾಹಕರ ಸಾರಾಂಶ ವರದಿ

Can you please create me a microsite that recaps last night’s event? Include event title, summary, photos, metrics, and include all social media stats.

Your client recap microsite is ready:

Updated screenshot preview of the ATV Big Air Tour client recap microsite.

It includes attendance, audience demographics, social engagement, giveaways, sponsor exposure, fan interaction, safety and operational results, client feedback, and next-event recommendations. All figures are labeled as sample data, and the report can be downloaded as a PDF using the button at the top.

ಮಾರುಕಟ್ಟೆ ಯೋಜನೆ

This week I have to get ready for our next event in Hays, Kansas. Can you help me put together a marketing plan for the event?

Absolutely. Here’s a practical marketing plan you can run in the week leading up to the Hays, Kansas show.

Hays, Kansas marketing plan

Goal: Build local awareness and attendance among families and motorsports fans.

One week before

  • Announce the event on Instagram, Facebook, and TikTok.

  • Share a stunt video with the date, location, and showtimes.

  • Tag the venue, sponsors, riders, and local Hays organizations.

  • Ask the coordinator to promote the show through their website, email, and social channels.

During the week

  • Post rider spotlights, behind-the-scenes footage, and countdown reminders.

  • Run a small paid social campaign within 60 miles of Hays.

  • Share practical information, including admission, parking, weather, and showtimes.

Show day

  • Post the schedule and capture setup, stunts, crowd reactions, giveaways, and sponsor signage.

  • Encourage guests to tag #ATVBigAirTour.

After the event

  • Share a highlight reel and thank the organizers, sponsors, and fans.

  • Record attendance, social engagement, giveaways, and audience feedback for the client recap.

ಪ್ರಯಾಣದಲ್ಲಿರುವಾಗಲೂ ವ್ಯವಹಾರವನ್ನು ಮುನ್ನಡೆಸಲು ChatGPT ಅವರಿಗೆ ನೆರವಾಗುತ್ತದೆ. ಅದು ಅವರ ದಿನವನ್ನು ಯೋಜಿಸುತ್ತದೆ, ಗ್ರಾಹಕರೊಂದಿಗಿನ ಸಂವಹನವನ್ನು ಗಮನಿಸುತ್ತದೆ, ಸಂಭಾವ್ಯ ಪ್ರಾಯೋಜಕತ್ವಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುತ್ತದೆ. ಇದರಿಂದ ಅವರು ಅತ್ಯುತ್ತಮ ಪ್ರದರ್ಶನ ನೀಡುವುದರತ್ತ ಗಮನ ಹರಿಸಬಹುದು. ಕೋಟ್ಯಂತರ ಡಾಲರ್ ಮೌಲ್ಯದ ಮನರಂಜನಾ ಸಂಸ್ಥೆಗಳೊಂದಿಗೆ ಸ್ಪರ್ಧಿಸುವ ಸಣ್ಣ ವ್ಯಾಪಾರಕ್ಕೆ ಆ ಅನುಕೂಲತೆ ಬಹಳ ಮುಖ್ಯ.

“ಪ್ರಯಾಣದಲ್ಲಿರುವಾಗ, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದನ್ನು ಕಲಿಯಲೇಬೇಕು. ಪ್ರದರ್ಶನ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ಏನು ಬೇಕಾದರೂ ಸಂಭವಿಸಬಹುದು. ಆಗ ತಕ್ಷಣ ದಿಕ್ಕು ಬದಲಿಸಿ, ಅದನ್ನು ಹೇಗೆ ನಿಭಾಯಿಸಬೇಕೆಂದು ಕಂಡುಕೊಳ್ಳಬೇಕು.”
—ಲರಿಸಾ ಗೆಟರ್, ಎಟಿವಿ ಬಿಗ್ ಏರ್ ಟೂರ್
ಎಟಿವಿ ಬಿಗ್ ಏರ್ ಟೂರ್‌ನಲ್ಲಿ ಡೆರೆಕ್ ಮತ್ತು ಲರಿಸಾ ಗೆಟರ್ ತಮ್ಮ ಹೆಣ್ಣುಮಕ್ಕಳೊಂದಿಗೆ ಗಾಳಿಯಲ್ಲಿ ನಡೆಯುವ ಎಟಿವಿ ಸಾಹಸ ಪ್ರದರ್ಶನವನ್ನು ವೀಕ್ಷಿಸುತ್ತಿದ್ದಾರೆ.
“ಉದ್ಯಮಿಯಾಗಿರುವುದರಲ್ಲಿ ಅಪಾರ ಸ್ವಾತಂತ್ರ್ಯವಿದೆ. ಏಕೆಂದರೆ ನೀವು ಯಾವುದನ್ನಾದರೂ ಕನಸು ಕಂಡು ಅದನ್ನು ನನಸಾಗಿಸಬಹುದು.”
—ಲರಿಸಾ ಗೆಟರ್, ಎಟಿವಿ ಬಿಗ್ ಏರ್ ಟೂರ್

ಇನ್ನಷ್ಟು ದೊಡ್ಡ ಕನಸುಗಳು

ChatGPT ಉಳಿಸಿಕೊಟ್ಟ ಸಮಯದಿಂದಾಗಿ ಡೆರೆಕ್ ಮತ್ತು ಲರಿಸಾ ಈಗ ತಮ್ಮ ಮುಂದಿನ ಗುರಿಯತ್ತ ಗಮನ ಹರಿಸುತ್ತಿದ್ದಾರೆ. ಅಭಿಮಾನಿಗಳಿಂದ ಬಯಲು ರಂಗಮಂದಿರಗಳು ಮತ್ತು ಕ್ರೀಡಾಂಗಣಗಳನ್ನು ತುಂಬಿಸುವ ಸ್ವತಂತ್ರ ಎಟಿವಿ ಬಿಗ್ ಏರ್ ಟೂರ್ ಕಾರ್ಯಕ್ರಮಗಳನ್ನು ಆಯೋಜಿಸುವುದು ಅವರ ಗುರಿ. ತಮ್ಮ ಮೂವರು ಪುಟ್ಟ ಹೆಣ್ಣುಮಕ್ಕಳೂ ಸೇರಿದಂತೆ ಮುಂದಿನ ಪೀಳಿಗೆಯ ಎಟಿವಿ ಸವಾರರು ಮತ್ತು ಉದ್ಯಮಿಗಳಿಗೆ ಸ್ಫೂರ್ತಿ ನೀಡುತ್ತಾ, ಸಾಧ್ಯವಾದಷ್ಟು ಹೆಚ್ಚು ಜನರನ್ನು ತಲುಪಲು ಅವರು ಬಯಸುತ್ತಾರೆ.

ಗೆಟರ್ ದಂಪತಿ ತಮ್ಮ ಇಡೀ ವ್ಯವಹಾರವನ್ನು ಕುಟುಂಬವನ್ನು ಮನಸ್ಸಿನಲ್ಲಿಟ್ಟುಕೊಂಡೇ ಕಟ್ಟಿದ್ದಾರೆ. ಧೈರ್ಯದಿಂದ ಮುನ್ನುಗ್ಗಿದರೆ ಏನು ಬೇಕಾದರೂ ಸಾಧ್ಯ ಎಂಬುದನ್ನು ಹೆಣ್ಣುಮಕ್ಕಳಿಗೆ ತೋರಿಸುತ್ತಾ, ಅವರು ಬೆಳೆದಂತೆ ತಮ್ಮ ಉದ್ಯಮಶೀಲ ಮನೋಭಾವವನ್ನೂ ಅವರಿಗೆ ಬಳುವಳಿಯಾಗಿ ನೀಡಲು ಆಶಿಸುತ್ತಾರೆ.

“ChatGPT ನನ್ನ ಕುಟುಂಬದೊಂದಿಗೆ ಕಳೆಯಲು ನಾನು ಊಹಿಸಿದ್ದಕ್ಕಿಂತಲೂ ಹೆಚ್ಚು ಸಮಯವನ್ನು ಮರಳಿ ನೀಡಿದೆ.”
—ಲರಿಸಾ ಗೆಟರ್, ಎಟಿವಿ ಬಿಗ್ ಏರ್ ಟೂರ್

ನಾವು ಟೂಲ್‌ಗಳನ್ನು ರಚಿಸುತ್ತೇವೆ, ಜನರು ಅವುಗಳಿಂದ ಭವಿಷ್ಯವನ್ನು ರೂಪಿಸುತ್ತಾರೆ.

ತಂತ್ರಜ್ಞಾನದ ಪ್ರತಿಯೊಂದು ಮಹತ್ತರ ಬದಲಾವಣೆಯನ್ನೂ ಅದನ್ನು ಬಳಸಿ ನಿರ್ಮಿಸಲು ಮುಂದಾಗುವ ಜನರೇ ರೂಪಿಸುತ್ತಾರೆ.