ಕಾಂಬೋಡಿಯಾ ಮೂಲದ ಅಪರಾಧ ವಂಚನೆ ಕಾರ್ಯಾಚರಣೆಯ ಸ್ಥಗಿತ
ಹೂಡಿಕೆ, ಪ್ರಣಯ, ಜೂಜು ಮತ್ತು ಸೋಗುಹಾಕುವ ವಂಚನೆಗಳಿಗೆ ChatGPT ಬಳಸುತ್ತಿದ್ದ ಕಾಂಬೋಡಿಯಾ ಮೂಲದ ಕಾರ್ಯಾಚರಣೆಯನ್ನು OpenAI ಸ್ಥಗಿತಗೊಳಿಸಿದೆ.
ಪರಿಚಯ
ಈ ವರ್ಷದ ಆರಂಭದಲ್ಲಿ, ಹೂಡಿಕೆ, ಪ್ರಣಯ, ಜೂಜು ಮತ್ತು ಕಾನೂನು ಜಾರಿ ಅಧಿಕಾರಿಗಳ ಸೋಗುಹಾಕುವ ವಂಚನೆಗಳಿಗೆ ChatGPT ಬಳಸುತ್ತಿದ್ದ ಕಾಂಬೋಡಿಯಾ ಮೂಲದ ಕಾರ್ಯಾಚರಣೆಯನ್ನು ನಾವು ಸ್ಥಗಿತಗೊಳಿಸಿದ್ದೇವೆ. WhatsApp ನಲ್ಲಿನ ನಮ್ಮ ಸಹವರ್ತಿಗಳಿಂದ ಸುಳಿವು ದೊರೆತ ಬಳಿಕ ನಾವು ಈ ಚಟುವಟಿಕೆಯನ್ನು ತನಿಖೆ ಮಾಡಲು ಆರಂಭಿಸಿದೆವು. ನಂತರ ಉದ್ಯಮದ ಪಾಲುದಾರರು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಹೆಚ್ಚುವರಿ ಬೆದರಿಕೆ ಸೂಚಕಗಳನ್ನು ಹಂಚಿಕೊಂಡಿದ್ದೇವೆ.
ಆಧುನಿಕ ವಂಚನೆ ಜಾಲಗಳ ಕುರಿತ ಪ್ರಮುಖ ವಾಸ್ತವವೊಂದನ್ನು ಈ ಕಾರ್ಯಾಚರಣೆ ತೋರಿಸುತ್ತದೆ: ಸಂಘಟಿತ ಅಪರಾಧ ಗುಂಪುಗಳು ಸಾಮಾನ್ಯವಾಗಿ ಒಂದೇ ಬಗೆಯ ವಂಚನೆಗೆ ಸೀಮಿತವಾಗಿರುವುದಿಲ್ಲ. ಬದಲಾಗಿ, ಸಂತ್ರಸ್ತರನ್ನು ವಂಚಿಸಲು ಹೆಚ್ಚು ಪರಿಣಾಮಕಾರಿ ಎಂದು ತೋರುವ ಯಾವುದೇ ಕಥೆ, ವ್ಯಕ್ತಿತ್ವ ಮತ್ತು ತಂತ್ರವನ್ನು ಅವರು ಅವಕಾಶಕ್ಕೆ ತಕ್ಕಂತೆ ಬಳಸುತ್ತಾರೆ. ವಂಚಕರು ಒಂದು ಬಗೆಯ ವಂಚನೆಯಿಂದ ಮತ್ತೊಂದಕ್ಕೆ ಬದಲಾಗುವುದನ್ನಾಗಲಿ, ಒಂದೇ ಕಾರ್ಯಾಚರಣೆಯಲ್ಲಿ ಹಲವು ವಂಚನಾ ತಂತ್ರಗಳನ್ನು ಸಂಯೋಜಿಸುವುದನ್ನಾಗಲಿ ನಮ್ಮ ತನಿಖೆಗಳಲ್ಲಿ ನಾವು ನಿಯಮಿತವಾಗಿ ಗಮನಿಸುತ್ತೇವೆ.
ಜಾಲದ ಕೆಲವು ಬಳಕೆದಾರರು ಮಾನವ ಕಳ್ಳಸಾಗಣೆ ಮತ್ತು ಬಲವಂತದ ಅಪರಾಧ ಚಟುವಟಿಕೆಯೊಂದಿಗೆ ನಂಟಿರುವುದನ್ನು ಸೂಚಿಸುವ ವಿಷಯವನ್ನೂ ರಚಿಸಿದ್ದರು. ಆಗ್ನೇಯ ಏಷ್ಯಾದ ಸಂಘಟಿತ ಅಪರಾಧ ಗುಂಪುಗಳು ಕಾನೂನುಬದ್ಧ ಉದ್ಯೋಗದ ಭರವಸೆ ನೀಡಿ ಕಾರ್ಮಿಕರನ್ನು ನೇಮಿಸಿಕೊಂಡು, ಬಳಿಕ ಅವರನ್ನು ಸಾಲದ ಜೀತ ಮತ್ತು ಬಲವಂತದ ವ್ಯವಸ್ಥೆಗಳಲ್ಲಿ ಸಿಲುಕಿಸುವ ಕುರಿತು ವ್ಯಾಪಕವಾಗಿ ಪ್ರಕಟವಾಗಿರುವ ವರದಿಗಳಲ್ಲಿ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ವಿವರಿಸಿರುವ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಮಾಹಿತಿಗೆ ಈ ಅವಲೋಕನಗಳು ಹೊಂದಿಕೆಯಾಗುತ್ತವೆ. ಭಾಗಿಯಾದ ಪ್ರತಿಯೊಬ್ಬರ ಪರಿಸ್ಥಿತಿಯನ್ನು ನಾವು ಸ್ವತಂತ್ರವಾಗಿ ನಿರ್ಧರಿಸಲು ಸಾಧ್ಯವಿಲ್ಲವಾದರೂ, ವಂಚನೆ ನಡೆಸುವವರೇ ಕೆಲವೊಮ್ಮೆ ಶೋಷಣೆಗೆ ಒಳಗಾದ ಸಂತ್ರಸ್ತರಾಗಿರಬಹುದು ಎಂಬುದನ್ನು ಈ ಚಟುವಟಿಕೆ ನೆನಪಿಸುತ್ತದೆ.
ಚಟುವಟಿಕೆ ನಡೆಸಿದವರು
ಕಾಂಬೋಡಿಯಾದಲ್ಲಿ ಹುಟ್ಟಿಕೊಂಡಿರುವ ಸಾಧ್ಯತೆ ಅತ್ಯಧಿಕವಾಗಿದ್ದ ಮತ್ತು ಬಾಂಟೇ ಮಿಯಾಂಚೆ ಪ್ರಾಂತ್ಯದ ಪೊಯಿಪೆಟ್ ನಗರದಲ್ಲಿ ಅಥವಾ ಅದರ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿದ್ದ ಸಾಧ್ಯತೆಯಿದ್ದ ಸಂಘಟಿತ ChatGPT ಖಾತೆಗಳ ಜಾಲವನ್ನು ನಾವು ನಿಷೇಧಿಸಿದ್ದೇವೆ. ಸಾರ್ವಜನಿಕ ವರದಿಗಳು(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಈ ನಗರವನ್ನು ಆನ್‌ಲೈನ್ ವಂಚನಾ ಕೇಂದ್ರಗಳು ಮತ್ತು ಕಳ್ಳಸಾಗಣೆ ಕಾರ್ಯಾಚರಣೆಗಳೊಂದಿಗೆ ಪದೇಪದೇ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಸಂಬಂಧಿಸಿವೆ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ).
ನಕಲಿ ಆನ್‌ಲೈನ್ ವ್ಯಕ್ತಿತ್ವಗಳನ್ನು ಸೃಷ್ಟಿಸಿ ನಿರ್ವಹಿಸಲು, ವಂಚನೆಯ ಗುರಿಗಳಿಗೆ ಕಳುಹಿಸಿದ ಸಂದೇಶಗಳನ್ನು ರಚಿಸಿ ಅನುವಾದಿಸಲು, ಮೋಸದ ಯೋಜನೆಗಳಿಗೆ ಪ್ರಚಾರ ಸಾಮಗ್ರಿ ಸಿದ್ಧಪಡಿಸಲು ಮತ್ತು ದಿನನಿತ್ಯದ ಕಾರ್ಯಾಚರಣೆಗಳಿಗೆ ನೆರವಾಗಲು ಈ ಜಾಲವು ನಮ್ಮ ಮಾದರಿಗಳನ್ನು ಬಳಸಿತು.
ನಾವು ಸ್ಥಗಿತಗೊಳಿಸಿದ ಹಿಂದಿನ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ವಂಚನೆ ಜಾಲಗಳಂತೆಯೇ, ಕೆಲವು ಬಳಕೆದಾರರು ಆಂತರಿಕ ಪ್ರಕಟಣೆಗಳನ್ನು ಬರೆಯುವುದು, ಸಿಬ್ಬಂದಿಯ ನಡುವಿನ ಸಂದೇಶಗಳನ್ನು ಅನುವಾದಿಸುವುದು ಹಾಗೂ ನೇಮಕಾತಿ, ವಲಸೆ ಸ್ಥಿತಿ, ಕೆಲಸದ ಪರಿಸ್ಥಿತಿ ಮತ್ತು ಉದ್ಯೋಗಿಗಳ ಶಿಸ್ತಿಗೆ ಸಂಬಂಧಿಸಿದಂತೆ ಕಂಡ ವಿಷಯಗಳನ್ನು ದಾಖಲಿಸುವುದು ಸೇರಿದಂತೆ ಆಡಳಿತಾತ್ಮಕ ಕೆಲಸಗಳಿಗೂ ChatGPT ಬಳಸಿದರು.
ನಡವಳಿಕೆ
ಈ ಜಾಲವು ವಿವಿಧ ಯೋಜನೆಗಳ ಅಂಶಗಳನ್ನು ಆಗಾಗ ಬೆರೆಸುತ್ತಾ, ಏಕಕಾಲದಲ್ಲಿ ಹಲವು ಬಗೆಯ ವಂಚನೆಗಳನ್ನು ನಡೆಸಿತು. ಉದಾಹರಣೆಗೆ, ಕ್ರಿಪ್ಟೋಕರೆನ್ಸಿ ಮತ್ತು ತಕ್ಷಣದ ಚಿನ್ನದ ವಹಿವಾಟಿಗೆ ಸಂಬಂಧಿಸಿದ ಮೋಸದ ಹೂಡಿಕೆ ಅವಕಾಶಗಳನ್ನು ಪರಿಚಯಿಸುವ ಮೊದಲು ವಿಶ್ವಾಸ ಗಳಿಸಲು ನಿರ್ವಾಹಕರು ಡೇಟಿಂಗ್ ವ್ಯಕ್ತಿತ್ವಗಳನ್ನು ಬಳಸಿದರು. ಇತರ ಬಳಕೆದಾರರು ಕಾಲ್ಪನಿಕ ಗುರುತುಗಳನ್ನು ಬಳಸಿ ಗುರಿಗಳೊಂದಿಗೆ ದೀರ್ಘವಾದ ಪ್ರಣಯ ಸಂಭಾಷಣೆ ನಡೆಸಿದರು, ನಕಲಿ ಬೋನಸ್ ಮತ್ತು ಗೆಲುವಿನ ಹಣ ನೀಡುವ ಆನ್‌ಲೈನ್ ಜೂಜಿನ ವೇದಿಕೆಗಳ ಪ್ರತಿನಿಧಿಗಳಂತೆ ನಟಿಸಿದರು ಅಥವಾ ಗಂಭೀರ ಅಪರಾಧ ಎಸಗಿದ್ದಕ್ಕಾಗಿ ದಂಡ ಪಾವತಿಸಬೇಕೆಂದು ಹೇಳಲು ಕಾನೂನು ಜಾರಿ ಸಂಸ್ಥೆಗಳ ಸೋಗುಹಾಕಿದರು.
ಕಥೆಗಳು ಬೇರೆಬೇರೆಯಾಗಿದ್ದರೂ, ಜಾಲದಾದ್ಯಂತ ಬಳಕೆದಾರರು ಒಂದೇ ಮೂಲಭೂತ ಮೋಸದ ನಡವಳಿಕೆಯನ್ನು ಸತತವಾಗಿ ಪ್ರದರ್ಶಿಸಿದರು. ಉದಾಹರಣೆಗೆ, ಅವರು ನಕಲಿ ಡೇಟಿಂಗ್ ಪ್ರೊಫೈಲ್‌ಗಳು, ಕಾಲ್ಪನಿಕ ಹೂಡಿಕೆ ತಜ್ಞರು ಮತ್ತು ಮೋಸದ ಕಾನೂನು ಜಾರಿ ಅಧಿಕಾರಿಗಳ ವ್ಯಕ್ತಿತ್ವಗಳನ್ನು ಸೃಷ್ಟಿಸಿ ನಿರ್ವಹಿಸಿದರು. ಪಾಸ್‌ಪೋರ್ಟ್‌ಗಳು, ಕಾನೂನು ಸೂಚನೆಗಳು, ಷೇರು ಖರೀದಿ ದೃಢೀಕರಣಗಳು ಮತ್ತು ಜೂಜಿನ ವೇದಿಕೆಗಳ ಬಳಕೆದಾರ ಸಂಪರ್ಕತಾಣಗಳು ಸೇರಿದಂತೆ ನಕಲಿ ದಾಖಲೆಗಳ ಚಿತ್ರಗಳನ್ನೂ ಅವರು ರಚಿಸಿದರು.
ನಾವು ಈ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಹಿಂದಿನ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ವರದಿಗಳಲ್ಲಿ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ತಿಳಿಸಿದಂತೆ, ವಂಚಕರು ಗುರಿಗಳೊಂದಿಗಿನ ಸಂವಹನದಲ್ಲಿ ಸಾಮಾನ್ಯ ಮಾದರಿಯನ್ನು ಅನುಸರಿಸಿದರು. ಇದನ್ನು ನಾವು ಸಂಪರ್ಕ (ಮಾತುಕತೆಗೆ ಮುಂದಾಗುವುದು), ಸೆಳೆತ (ಭಾವನೆ ಮೂಡಿಸುವುದು) ಮತ್ತು ಸುಲಿಗೆ (ಹಣ ಕಸಿಯುವುದು) ಎಂದು ಕರೆಯುತ್ತೇವೆ.
ಸಂಪರ್ಕ: WhatsApp ಮತ್ತು Telegram ನಂತಹ ಸಂದೇಶ ವೇದಿಕೆಗಳಲ್ಲಿ ಗುರಿಗಳೊಂದಿಗಿನ ಸಂಭಾಷಣೆಗಳನ್ನು ಅನುವಾದಿಸಲು ಮತ್ತು ರಚಿಸಲು ಈ ಜಾಲವು ChatGPT ಬಳಸಿತು. ವಂಚಕರು ತಮ್ಮ ನಕಲಿ ವ್ಯಕ್ತಿತ್ವಗಳನ್ನು ನಂಬಿಸುವಂತೆ ಮಾಡಲು ಸಾಮಾಜಿಕ ಮಾಧ್ಯಮದ ವಿಷಯ ರಚಿಸಿ, ಡೇಟಿಂಗ್ ಪ್ರೊಫೈಲ್‌ಗಳಿಗೆ ಬೇಕಾದ ಮಾಹಿತಿಯನ್ನು ಸಂಶೋಧಿಸಿದರು.
ಸೆಳೆತ: ವಂಚಕರ ಸಂದೇಶಗಳು ಭಾವನಾತ್ಮಕ ಒತ್ತಡ ಮತ್ತು ವಿಶ್ವಾಸ ಬೆಳೆಸುವ ತಂತ್ರಗಳನ್ನು ಹೆಚ್ಚಾಗಿ ಅವಲಂಬಿಸಿದ್ದವು. ಖಾತರಿಪಡಿಸಿದ ಲಾಭ ಮತ್ತು “ಅಪಾಯವಿಲ್ಲದ” ಹೂಡಿಕೆಗಳ ಭರವಸೆ, ಪ್ರಣಯದ ಮಾತುಗಳು, ಸಂಭಾಷಣೆಗಳನ್ನು ರಹಸ್ಯವಾಗಿಡುವ ಸೂಚನೆಗಳು ಹಾಗೂ ಕಾಲ್ಪನಿಕ ಬೋನಸ್‌ಗಳ ಅವಧಿ ಮುಗಿಯುವ ಮೊದಲು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಮಾಡಿದ ಕೋರಿಕೆಗಳು ಇದಕ್ಕೆ ಉದಾಹರಣೆಗಳಾಗಿವೆ.
ಸುಲಿಗೆ: ಹೇಳಿಕೊಳ್ಳಲಾದ ಬಹುಮಾನಗಳನ್ನು ಪಡೆಯಲು ಹಣ ಠೇವಣಿ ಇಡುವಂತೆ, ಸಕ್ರಿಯಗೊಳಿಸುವ ಶುಲ್ಕ ಪಾವತಿಸುವಂತೆ ಮತ್ತು ಕಾಲ್ಪನಿಕ ದಂಡಗಳನ್ನು ಕಟ್ಟುವಂತೆ ವಂಚಕರು ಸಂತ್ರಸ್ತರಿಗೆ ಸೂಚಿಸಿದರು. ನಂತರ ಪಾವತಿಯ ಪುರಾವೆಯಾಗಿ ಹಣ ವರ್ಗಾವಣೆಯ ತೆರೆಚಿತ್ರಗಳು ಅಥವಾ ಖಾತೆಯ ಮಾಹಿತಿ ನೀಡುವಂತೆ ಹೇಳಿದರು.

ಜಾಲದಲ್ಲಿನ ವಂಚಕರೊಬ್ಬರು ChatGPT ಬಳಸಿ ರಚಿಸಿದ ನಕಲಿ ಕ್ರಿಪ್ಟೋಕರೆನ್ಸಿ ವಹಿವಾಟು ಬಳಕೆದಾರ ಸಂಪರ್ಕತಾಣ.

ನಕಲಿ ಹೂಡಿಕೆ ಯೋಜನೆಯನ್ನು ಪ್ರಚಾರ ಮಾಡಲು ಜಾಲದಲ್ಲಿನ ವಂಚಕರೊಬ್ಬರು ರಚಿಸಿದ AI-ರಚಿತ ಚಿತ್ರ.
ಮಾನವ ಕಳ್ಳಸಾಗಣೆಯ ಸೂಚಕಗಳು
ವಂಚನೆಗಳ ಜೊತೆಗೆ, ನಾವು ಪತ್ತೆಹಚ್ಚಿ ಸ್ಥಗಿತಗೊಳಿಸುವ ಮಾನವ ಕಳ್ಳಸಾಗಣೆ ಅಥವಾ ಬಲವಂತದ ದುಡಿಮೆಯಂತಹ ಇತರ ನೀತಿ ಉಲ್ಲಂಘನೆಯ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಸೂಚಿಸುವ ವಿಷಯವನ್ನೂ ಕೆಲವು ಬಳಕೆದಾರರು ರಚಿಸಿದ್ದರು. ಇದರಲ್ಲಿ ವಿಮಾನ ಪ್ರಯಾಣ, ವಸತಿ, ಊಟ, ವೀಸಾ ಮತ್ತು ಕೆಲಸದ ಪರವಾನಗಿಗಳನ್ನು ಒದಗಿಸುವ ಭರವಸೆ ನೀಡಿದ ಪೊಯಿಪೆಟ್‌ನ “ಮಾತುಕತೆಗಾರ” ಹುದ್ದೆಗಳ ಸಾಮಾಜಿಕ ಮಾಧ್ಯಮ ಜಾಹೀರಾತುಗಳೂ ಸೇರಿದ್ದವು.
ಇತರ ಚಟುವಟಿಕೆಗಳು ಕಾರ್ಯಾಚರಣೆಯೊಳಗಿನ ಕಾರ್ಮಿಕರ ನಿರ್ವಹಣೆಗೆ ಸಂಬಂಧಿಸಿದಂತೆ ಕಂಡುಬಂದವು. ಬಳಕೆದಾರರು ಉದ್ಯೋಗಿಗಳ ಸಾಲಗಳು, ವೇತನ ಕಡಿತಗಳು, ಶಿಸ್ತುಕ್ರಮದ ದಂಡಗಳು ಮತ್ತು ಸಾಲ ಮರುಪಾವತಿಗಳ ದಾಖಲೆಗಳನ್ನು ನಿರ್ವಹಿಸಿದರು. ವಲಸೆ ಸ್ಥಿತಿ, ಕೆಲಸದ ಪರವಾನಗಿ, ವೀಸಾ ಅವಧಿ ಮೀರಿ ಉಳಿಯುವುದು ಮತ್ತು ನೇಮಕಾತಿ ಪ್ರೋತ್ಸಾಹಧನಗಳ ಕುರಿತ ಚರ್ಚೆಗಳನ್ನೂ ಅನುವಾದಿಸಿದರು.
ಕೆಲವು ಸಂಭಾಷಣೆಗಳಲ್ಲಿ ಬಂಧನದಲ್ಲಿಟ್ಟಿರುವುದು, ತಪ್ಪಿಸಿಕೊಳ್ಳುವ ಪ್ರಯತ್ನಗಳು ಹಾಗೂ ಕಳ್ಳಸಾಗಣೆಗೆ ಒಳಗಾಗಿ ವಂಚನೆ ಕಾರ್ಯಾಚರಣೆಗಳಲ್ಲಿ ಬಲವಂತವಾಗಿ ದುಡಿಸಲಾದ ಜನರು ಎದುರಿಸಬಹುದಾದ ಅಪರಾಧ ಹೊಣೆಗಾರಿಕೆಯ ಉಲ್ಲೇಖಗಳೂ ಇದ್ದವು. ಈ ಸಂಭಾಷಣೆಗಳಿಂದ ಯಾವುದೇ ನಿರ್ದಿಷ್ಟ ವ್ಯಕ್ತಿಯ ಪರಿಸ್ಥಿತಿಯನ್ನು ನಿರ್ಧರಿಸಲು ನಮಗೆ ಸಾಧ್ಯವಿಲ್ಲವಾದರೂ, ಅವು ಆಗ್ನೇಯ ಏಷ್ಯಾದ ಸಂಘಟಿತ ಅಪರಾಧ ಗುಂಪುಗಳ ಚಟುವಟಿಕೆಗಳನ್ನು ವರದಿ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಮಾಡುವ ವ್ಯಾಪಕ ಸಾರ್ವಜನಿಕ ವಿವರಣೆಗಳಿಗೆ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಹೊಂದಿಕೆಯಾಗುತ್ತವೆ.


ಸಾಮಾಜಿಕ ಮಾಧ್ಯಮದಲ್ಲಿ ಕಾಂಬೋಡಿಯಾದ ಉದ್ಯೋಗಗಳನ್ನು ಜಾಹೀರಾತು ಮಾಡಲು ಜಾಲದಲ್ಲಿನ ವಂಚಕರು ರಚಿಸಿದ AI-ರಚಿತ ಚಿತ್ರಗಳು. OpenAI ಸೂಕ್ಷ್ಮ ಮಾಹಿತಿಯನ್ನು ಮರೆಮಾಡಿದೆ.
ಪರಿಣಾಮ
ಈ ಕಾರ್ಯಾಚರಣೆಗೆ ಸಂಬಂಧಿಸಿದ ChatGPT ಖಾತೆಗಳನ್ನು ನಾವು ನಿಷೇಧಿಸಿದ್ದೇವೆ, ಉದ್ಯಮದ ಪಾಲುದಾರರು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಸಂಬಂಧಿತ ಸೂಚಕಗಳನ್ನು ಹಂಚಿಕೊಂಡಿದ್ದೇವೆ ಹಾಗೂ ಈ ವ್ಯಕ್ತಿಗಳು ನಮ್ಮ ಉತ್ಪನ್ನಗಳು ಮತ್ತು ಸೇವೆಗಳಿಗೆ ಮತ್ತೆ ಪ್ರವೇಶ ಪಡೆಯುವುದನ್ನು ಕಷ್ಟಕರಗೊಳಿಸಲು ಕ್ರಮ ಕೈಗೊಂಡಿದ್ದೇವೆ.
ಈ ಜಾಲಕ್ಕೆ ಸಂಬಂಧಿಸಿದ ಹಣಕಾಸು ನಷ್ಟದ ಪೂರ್ಣ ಪ್ರಮಾಣ ತಿಳಿದಿಲ್ಲ. ಆದರೆ ವಂಚಕರ ಸ್ವಂತ ಸಂವಹನಗಳನ್ನು ಆಧರಿಸಿ ಹೇಳುವುದಾದರೆ, ಈ ಕಾರ್ಯಾಚರಣೆಯು ಹಲವು ಬಗೆಯ ವಂಚನೆಗಳಲ್ಲಿ ನೂರಾರು ಗುರಿಗಳೊಂದಿಗೆ ಸಂವಹನ ನಡೆಸಿರಬಹುದು. ವೈಯಕ್ತಿಕ ಸಂತ್ರಸ್ತರು ಸಾವಿರಾರು ಡಾಲರ್ ಕಳೆದುಕೊಂಡಿರುವುದನ್ನು ಬಳಕೆದಾರರ ಸಂಭಾಷಣೆಗಳು ಉಲ್ಲೇಖಿಸಿವೆ. ಆದರೆ ಆ ಹೇಳಿಕೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಾಗಿಲ್ಲ.
ವಿಶಾಲವಾಗಿ ನೋಡಿದರೆ, ಈ ಪ್ರಕರಣವು ಎರಡು ಪ್ರವೃತ್ತಿಗಳನ್ನು ಮತ್ತಷ್ಟು ದೃಢಪಡಿಸುತ್ತದೆ. ಮೊದಲನೆಯದಾಗಿ, ಸಂಘಟಿತ ವಂಚನೆ ಜಾಲಗಳು ಒಂದೇ ಬಗೆಯ ವಂಚನೆಗೆ ಸೀಮಿತವಾಗದೆ, ಏಕಕಾಲದಲ್ಲಿ ಹಲವು ಮೋಸದ ಯೋಜನೆಗಳನ್ನು ನಡೆಸುವಷ್ಟು ವೈವಿಧ್ಯಮಯವಾಗಿರಬಹುದು. ಎರಡನೆಯದಾಗಿ, ಆನ್‌ಲೈನ್ ವಂಚನೆ, ಸಂಘಟಿತ ಅಪರಾಧ ಮತ್ತು ಮಾನವ ಕಳ್ಳಸಾಗಣೆಯ ನಡುವಿನ ಗಡಿಗಳು ಹೆಚ್ಚಾಗಿ ಅಸ್ಪಷ್ಟವಾಗಿರುತ್ತವೆ. ಆದ್ದರಿಂದ, ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಲು ಸಂತ್ರಸ್ತರನ್ನು ಗುರಿಯಾಗಿಸುವ ವಂಚನಾ ಚಟುವಟಿಕೆಯನ್ನು ಮಾತ್ರವಲ್ಲದೆ, ಅದನ್ನು ಆಯೋಜಿಸಿ ಲಾಭ ಪಡೆಯುವ ಅಪರಾಧ ಸಂಘಟನೆಗಳನ್ನೂ ಗುರಿಯಾಗಿಸಬೇಕು.