DALL·E 2
DALL·E 2 ಒಂದು AI ವ್ಯವಸ್ಥೆಯಾಗಿದ್ದು, ಇದು ನೈಸರ್ಗಿಕ ಭಾಷೆಯ ವಿವರಣೆಯಿಂದ ವಾಸ್ತವಿಕ ಚಿತ್ರಗಳು ಮತ್ತು ಕಲೆಯನ್ನು ರಚಿಸಬಹುದು.
This post introduced DALL·E 2.
For the current experience:
ಇತ್ತೀಚಿನ ಅಪ್ಡೇಟ್ಗಳು
DALL·E 2 ಪಠ್ಯ ವಿವರಣೆಯಿಂದ ಮೂಲ ಮತ್ತು ನೈಜ ರೀತಿಯ ಚಿತ್ರಗಳು ಹಾಗೂ ಕಲಾಕೃತಿಗಳನ್ನು ರಚಿಸಬಹುದು. ಇದು ಪರಿಕಲ್ಪನೆಗಳು, ಲಕ್ಷಣಗಳು ಮತ್ತು ಶೈಲಿಗಳನ್ನು ಒಟ್ಟುಗೂಡಿಸಬಹುದು.





DALL·E 2 ಪಠ್ಯ ವಿವರಣೆಯಿಂದ ಮೂಲ ಮತ್ತು ನೈಜ ರೀತಿಯ ಚಿತ್ರಗಳು ಹಾಗೂ ಕಲಾಕೃತಿಗಳನ್ನು ರಚಿಸಬಹುದು. ಇದು ಪರಿಕಲ್ಪನೆಗಳು, ಲಕ್ಷಣಗಳು ಮತ್ತು ಶೈಲಿಗಳನ್ನು ಒಟ್ಟುಗೂಡಿಸಬಹುದು.
ಜನವರಿ 2021ರಲ್ಲಿ OpenAI DALL·E ಅನ್ನು ಪರಿಚಯಿಸಿತು. ಒಂದು ವರ್ಷ ನಂತರ, ನಮ್ಮ ಹೊಸ ಸಿಸ್ಟಮ್ DALL·E 2 ನಾಲ್ಕು ಪಟ್ಟು ಹೆಚ್ಚು ರೆಸಲ್ಯೂಶನ್‌ನೊಂದಿಗೆ ಹೆಚ್ಚು ನೈಜ ಮತ್ತು ನಿಖರ ಚಿತ್ರಗಳನ್ನು ರಚಿಸುತ್ತದೆ.


ಮೌಲ್ಯಮಾಪಕರು ಪ್ರತಿ ಮಾಡೆಲ್ ಅನ್ನು ಹೋಲಿಸಿದಾಗ, DALL·E 1ಗಿಂತ DALL·E 2ಗೆ ಹೆಚ್ಚಿನ ಮೆಚ್ಚುಗೆ ದೊರಕಿತು.
- 71.7%
ಕ್ಯಾಪ್ಷನ್ ಮ್ಯಾಚಿಂಗ್‌ಗಾಗಿ ಹೆಚ್ಚು ಮೆಚ್ಚಲ್ಪಟ್ಟಿದೆ
- 88.8%
ಫೋಟೋರಿಯಲಿಸಮ್‌ಗಾಗಿ ಹೆಚ್ಚು ಮೆಚ್ಚಲ್ಪಟ್ಟಿದೆ
ಸಂಬಂಧಿತ ಲೇಖನಗಳು
ಸುರಕ್ಷತೆಯ ಮೇಲೆ ಕೇಂದ್ರೀಕರಣ
DALL·E 2 ಸಂಶೋಧನಾ ಪ್ರಾಜೆಕ್ಟ್ ಆಗಿ ಪ್ರಾರಂಭವಾಗಿ ಈಗ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ನಾವು ಅಭಿವೃದ್ಧಿಪಡಿಸಿರುವ ಮತ್ತು ನಿರಂತರವಾಗಿ ಸುಧಾರಿಸುತ್ತಿರುವ ಸುರಕ್ಷತಾ ಕ್ರಮಗಳಲ್ಲಿ ಒಳಗೊಂಡಿರುವವುಗಳು:
ಹಾನಿಕಾರಕ ಗರಚನೆಳನ್ನು ತಡೆಗಟ್ಟುವುದು
ನಾವು DALL·E 2 ನ ಹಿಂಸಾತ್ಮಕ, ದ್ವೇಷಾತ್ಮಕ ಅಥವಾ ಅಶ್ಲೀಲ ಚಿತ್ರಗಳನ್ನು ರಚಿಸುವ ಸಾಮರ್ಥ್ಯವನ್ನು ಸೀಮಿತಗೊಳಿಸಿದ್ದೇವೆ. ಟ್ರೈನಿಂಗ್ ಡೇಟಾದಿಂದ ಅತಿಯಾಗಿ ಸ್ಪಷ್ಟ ವಿಷಯಗಳನ್ನು ತೆಗೆದುಹಾಕುವ ಮೂಲಕ, ನಾವು DALL·E 2 ಈ ಕಲ್ಪನೆಗಳಿಗೆ ಒಳಪಡುವಿಕೆಯ ಪ್ರಮಾಣವನ್ನು ಕಡಿಮೆ ಮಾಡಿದ್ದೇವೆ. ಸಾರ್ವಜನಿಕ ವ್ಯಕ್ತಿಗಳ ಮುಖಗಳನ್ನು ಒಳಗೊಂಡ ನೈಜ ವ್ಯಕ್ತಿಗಳ ಫೋಟೋರಿಯಲಿಸ್ಟಿಕ್ ಚಿತ್ರಣಗಳನ್ನು ತಡೆಯಲು ನಾವು ಸುಧಾರಿತ ತಂತ್ರಗಳನ್ನು ಸಹ ಬಳಸಿದ್ದೇವೆ.
ಸುರಕ್ಷತೆಯನ್ನು ಸುಧಾರಿಸುವ ಬಗ್ಗೆ ಓದಿರಿ
ದುರುಪಯೋಗವನ್ನು ತಡೆಯುವುದು
ನಮ್ಮ ವಿಷಯ ನೀತಿ ಬಳಕೆದಾರರಿಗೆ ಹಿಂಸಾತ್ಮಕ, ಅಶ್ಲೀಲ ಅಥವಾ ರಾಜಕೀಯ ವಿಷಯವನ್ನು ಮತ್ತು ಇನ್ನೂ ಕೆಲವು ಇತರ ವರ್ಗಗಳನ್ನು ರಚಿಸಲು ಅನುಮತಿಸುವುದಿಲ್ಲ. ನಮ್ಮ ಫಿಲ್ಟರ್‌ಗಳು ನೀತಿಯನ್ನು ಉಲ್ಲಂಘಿಸುವ ಸಾಧ್ಯತೆ ಇರುವ ಪ್ರಾಂಪ್ಟ್ ಅಥವಾ ಚಿತ್ರ ಅಪ್ಲೋಡ್‌ಗಳನ್ನು ಗುರುತಿಸಿದರೆ, ನಾವು ಚಿತ್ರಗಳನ್ನು ರಚಿಸುವುದಿಲ್ಲ. ದುರುಪಯೋಗವನ್ನು ತಡೆಯಲು ನಮ್ಮ ಬಳಿ ಸ್ವಯಂಚಾಲಿತ ಮತ್ತು ಮಾನವ ಮೇಲ್ವಿಚಾರಣಾ ವ್ಯವಸ್ಥೆಗಳೂ ಇವೆ.
ವಿಷಯ ನೀತಿಯನ್ನು ಓದಿರಿ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ)
ಕಲಿಕೆಯ ಆಧಾರದ ಮೇಲೆ ಹಂತ ಹಂತವಾಗಿ ನಿಯೋಜನೆ
ನೈಜ ಜಗತ್ತಿನ ಬಳಕೆಯಿಂದ ಕಲಿಯುವುದು AI ಅನ್ನು ಜವಾಬ್ದಾರಿಯುತವಾಗಿ ಅಭಿವೃದ್ಧಿಪಡಿಸುವ ಮತ್ತು ನಿಯೋಜಿಸುವ ಪ್ರಮುಖ ಭಾಗವಾಗಿದೆ. ನಾವು DALL·E 2 ಅನ್ನು ಸೀಮಿತ ಸಂಖ್ಯೆಯ ನಂಬಿಗಸ್ತ ಬಳಕೆದಾರರಿಗೆ ಪ್ರಿವ್ಯೂಗಾಗಿ ನೀಡುವ ಮೂಲಕ ಪ್ರಾರಂಭಿಸಿದ್ದೇವೆ. ತಂತ್ರಜ್ಞಾನದ ಸಾಮರ್ಥ್ಯಗಳು ಮತ್ತು ಮಿತಿಗಳ ಬಗ್ಗೆ ಹೆಚ್ಚು ತಿಳಿದುಕೊಂಡು, ನಮ್ಮ ಸುರಕ್ಷತಾ ವ್ಯವಸ್ಥೆಗಳ ಮೇಲೆ ವಿಶ್ವಾಸ ಬೆಳೆಸಿದಂತೆ, ನಾವು ನಿಧಾನವಾಗಿ ಹೆಚ್ಚು ಬಳಕೆದಾರರನ್ನು ಸೇರಿಸಿ ಜುಲೈ 2022ರಲ್ಲಿ DALL·E ಅನ್ನು ಬೀಟಾ ಆವೃತ್ತಿಯಾಗಿ ಲಭ್ಯವನ್ನಾಗಿಸಿದ್ದೇವೆ.
ಅಪಾಯಗಳು ಮತ್ತು ಮಿತಿಗಳನ್ನು ವೀಕ್ಷಿಸಿ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ)
DALL·E 2 ಜನರಿಗೆ ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಶಕ್ತಿಯನ್ನು ನೀಡುತ್ತದಎಂಬುದು ನಮ್ಮ ಭರವಸೆ.
DALL·E 2 ಸುಧಾರಿತ AI ವ್ಯವಸ್ಥೆಗಳು ನಮ್ಮ ಜಗತ್ತನ್ನು ಹೇಗೆ ನೋಡುತ್ತವೆ ಮತ್ತು ಅರ್ಥಮಾಡಿಕೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ಮಾನವಕುಲಕ್ಕೆ ಉಪಯುಕ್ತ AI ನಿರ್ಮಿಸುವ ನಮ್ಮ ಧ್ಯೇಯದ ಪ್ರಮುಖ ಭಾಗವಾಗಿದೆ.
ಸಂಶೋಧನಾ ಪ್ರಗತಿಗಳು
ಆದಿತ್ಯ ರಾಮೇಶ್, ಪ್ರಫುಲ್ಲ ಧಾರಿವಾಳ್, ಅಲೆಕ್ಸ್ ನಿಕೋಲ್, ಕೇಸಿ ಚು, ಮಾರ್ಕ್ ಚೆನ್
ಎಂಜಿನಿಯರಿಂಗ್, ವಿನ್ಯಾಸ, ಉತ್ಪನ್ನ ಮತ್ತು ಪ್ರೋಟೋಟೈಪಿಂಗ್
ಜೆಫ್ ಬೆಲ್ಗಮ್, ಡೇವ್ ಕಮಿಂಗ್ಸ್, ಜೋನಾಥನ್ ಗಾರ್ಡನ್, ಕ್ರಿಸ್ ಹಾಲಸಿ, ಶಾನ್ ಜೈನ್, ಜೋಯಾನ್ ಜಾಂಗ್, ಫ್ರೇಸರ್ ಕೆಲ್ಟನ್, ವಿಶಾಲ್ ಕುವೋ, ಜೋಯೆಲ್ ಲೆಹ್ಮನ್, ರೇಚೆಲ್ ಲಿಂಮ್, ಬಿಯಾಂಕಾ ಮಾರ್ಟಿನ್, ಇವನ್ ಮೊರಿಕಾವಾ, ರಾಜೀವ್ ನಾಯಕ್, ಗ್ಲೆನ್ ಪಾವೆಲ್, ಕ್ರಿಜನ್ ರಿಜ್‌ಹೋವರ್, ಡೇವಿಡ್ ಶ್ನರ್, ಮ್ಯಾಡಿ ಸಿಮೆನ್ಸ್, ಕೆನೆತ್ ಸ್ಟ್ಯಾನ್ಲಿ, ಫೆಲಿಪೆ ಸಚ್, ಚೆಲ್ಸಿಯಾ ವಾಸ್, ಜಸ್ಟಿನ್ ಜೇ ವಾಂಗ್
ಸಂವಹನ, ನೀತಿ, ಕಾನೂನು, ಕಾರ್ಯಾಚರಣೆ, ಸುರಕ್ಷತೆ ಮತ್ತು ಭದ್ರತೆ
ಸ್ಟೀವನ್ ಅಡ್ಲರ್, ಲಾಮಾ ಅಹ್ಮದ್, ಮೈಲ್ಸ್ ಬ್ರುಂಡೇಜ್, ಕೆವಿನ್ ಬಟನ್, ಚೆ ಚಾಂಗ್, ಫೋಟಿಸ್ ಚಾಂಟ್ಸಿಸ್, ಡೆರಿಕ್ ಚೆನ್, ಫ್ರಾನ್ಸಿಸ್ ಚೋಯ್, ಸ್ಟೀವ್ ಡೌಲಿಂಗ್, ಎಲಿ ಜಾರ್ಜಸ್, ಶಿನೋ ಜೊಮೊಟೋ, ಅರಿಸ್ ಕಾನ್ಸ್ಟಾಂಟಿನಿಡಿಸ್, ಗ್ರೆಚೆನ್ ಕ್ರ್ಯೂಗರ್, ಆಂಡ್ರೂ ಮೇನ್, ಪ್ಯಾಮೆಲಾ ಮಿಶ್ಕಿನ್, ಬಾಬ್ ರಾಟ್‌ಸ್ಟೆಡ್, ನ್ಯಾಟಲಿ ಸಮರ್ಸ್, ಡೇವ್ ವಿಲ್‌ನರ್, ಹ್ಯಾನಾ ವಾಂಗ್
ಸ್ವೀಕೃತಿಗಳು
ಈ ಬಿಡುಗಡೆಯ ಬಗ್ಗೆ ಸಹಾಯ ಮಾಡಿದ ಮತ್ತು ಪ್ರತಿಕ್ರಿಯೆ ನೀಡಿದ ಜನರಿಗೆ ಧನ್ಯವಾದಗಳು: ಸಂಧಿನಿ ಅಗರ್ವಾಲ್, ಸ್ಯಾಮ್ ಆಲ್ಟ್ಮನ್, ಚೆಸ್ಟರ್ ಚೋ, ಪೀಟರ್ ಹೋಶೆಲ್, ಜಾಕೋಬ್ ಜಾಕ್ಸನ್, ಜಾಂಗ್ ವೂಕ್ ಕಿಮ್, ಮ್ಯಾಟ್ ನೈಟ್, ಜೇಸನ್ ಕ್ವಾನ್, ಅನ್ನಾ ಮಕಂಜು, ಕೇಟೀ ಮೇಯರ್, ಬಾಬ್ ಮೆಕ್ ಗ್ರೂ, ಲ್ಯೂಕ್ ಮಿಲ್ಲರ್, ಮೀರಾ ಮುರಾಟಿ, ಆಡಮ್ ನೇಸ್, ಹ್ಯೋನ್ವೂ ನೋಹ್, ಕಲ್ಲೆನ್ ಒ'ಕೀಫ್, ಲಾಂಗ್ ಔಯಾಂಗ್, ಮೈಕೆಲ್ ಪೆಟ್ರೋವ್, ಹೆನ್ರಿಕ್ ಪಾಂಡೆ ಡಿ ಒಲಿವೇರಾ ಪಿಂಟೊ, ಅಲೆಕ್ ರಾಡ್ಫೋರ್ಡ್, ಗಿರೀಶ್ ಶಾಸ್ತ್ರಿ, ಪ್ರಣವ್ ಶ್ಯಾಮ್, ಅರವಿಂದ್ ಶ್ರೀನಿವಾಸ್, ಇಲ್ಯಾ ಸುಟ್ಸ್ಕೆವರ್, ಪ್ರೆಸ್ಟನ್ ಟಗ್ಗಲ್, ಅರುಣ್ ವಿಜಯವರ್ಗಿಯಾ, ಪೀಟರ್ ವೆಲಿಂಡರ್





