ಆಸ್ಟ್ರೇಲಿಯಾದ ಯುವ ಸುರಕ್ಷತಾ ನೀಲನಕ್ಷೆಯ ಪರಿಚಯ
ಯುವಜನರನ್ನು ರಕ್ಷಿಸಲು, ಸಬಲೀಕರಿಸಲು ಮತ್ತು ಅವರಿಗೆ ಸುರಕ್ಷಿತ ಅನುಭವಗಳನ್ನು ಕಲ್ಪಿಸಲು OpenAI ಅನುಸರಿಸುವ ವಿಧಾನ.
ಯುವಜನರು AI ಅನ್ನು ಬಳಸುವಾಗ ಅವರನ್ನು ರಕ್ಷಿಸುವ ಮಾರ್ಗಸೂಚಿ ಹಾಗೂ ಆಸ್ಟ್ರೇಲಿಯಾದ ನೀತಿ ರೂಪಣೆಗೆ ಪ್ರಾಯೋಗಿಕ ಕೊಡುಗೆಯಾದ ಆಸ್ಟ್ರೇಲಿಯಾದ ಯುವ ಸುರಕ್ಷತಾ ನೀಲನಕ್ಷೆ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ)ಯನ್ನು ನಾವು ಪರಿಚಯಿಸುತ್ತಿದ್ದೇವೆ. ಆಸ್ಟ್ರೇಲಿಯಾದ ಯುವಜನರ ಯೋಗಕ್ಷೇಮವನ್ನು ರಕ್ಷಿಸುವುದರ ಜೊತೆಗೆ, ಕಲಿಯಲು, ಸೃಜನಶೀಲರಾಗಲು ಮತ್ತು ಕೌಶಲಗಳನ್ನು ಬೆಳೆಸಲು ಹೆಚ್ಚಿನ ಅವಕಾಶ ನೀಡುವ ಸಾಧನಗಳು ಅವರಿಗೆ ಸಿಗಬೇಕು. AI ಯ ಅರಿವು ಮತ್ತು ವಯಸ್ಸಿಗೆ ಸೂಕ್ತವಾದ ಸುರಕ್ಷತಾ ಕ್ರಮಗಳಿಂದ ಹಿಡಿದು, ಗೌಪ್ಯತೆಯನ್ನು ಕಾಪಾಡುವ ವಯಸ್ಸಿನ ದೃಢೀಕರಣ, ನೈಜ ಜಗತ್ತಿನ ಬಿಕ್ಕಟ್ಟು ಬೆಂಬಲದ ಸಂಪರ್ಕಗಳು ಹಾಗೂ ಸುಲಭವಾಗಿ ಬಳಸಬಹುದಾದ ಪೇರೆಂಟಲ್ ಕಂಟ್ರೋಲ್ಸ್‌ವರೆಗೆ ಆರು ಸ್ತಂಭಗಳನ್ನು ಈ ನೀಲನಕ್ಷೆ ವಿವರಿಸುತ್ತದೆ. ಹದಿಹರೆಯದವರಿಗಾಗಿ ಜವಾಬ್ದಾರಿಯುತ AI ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ಯುವಜನರಿಗೆ ಎದುರಾಗುವ ಅಪಾಯಗಳನ್ನು ಗುರುತಿಸಿ ಪರಿಹರಿಸುವಂತೆ ಕಂಪನಿಗಳನ್ನು ಹೇಗೆ ಹೊಣೆಗಾರರನ್ನಾಗಿಸಬೇಕು ಎಂಬುದನ್ನು ವ್ಯಾಖ್ಯಾನಿಸಲು ಇವೆಲ್ಲವೂ ನೆರವಾಗುತ್ತವೆ.
ಈ ತತ್ವಗಳ ಆಧಾರದಲ್ಲಿ ನಮ್ಮ ಉತ್ಪನ್ನಗಳ ಸುರಕ್ಷತಾ ಕ್ರಮಗಳನ್ನು ನಾವು ಇನ್ನಷ್ಟು ಬಲಪಡಿಸುತ್ತಿದ್ದೇವೆ. ಆಗಸ್ಟ್‌ನಲ್ಲಿ ನಾವು ಆಸ್ಟ್ರೇಲಿಯಾದಲ್ಲಿ ಹದಿಹರೆಯದವರಿಗಾಗಿ ChatGPT ಅನ್ನು ಹಂತಹಂತವಾಗಿ ಪರಿಚಯಿಸಲು ಆರಂಭಿಸಿದೆವು. 13ರಿಂದ 17 ವರ್ಷ ವಯಸ್ಸಿನವರೆಂದು ಗುರುತಿಸಲಾದ ಬಳಕೆದಾರರಿಗೆ ಇದು ಹೊಸ ಪೂರ್ವನಿಯೋಜಿತ ಅನುಭವವಾಗಿದ್ದು, ಅವರ ಬೆಳವಣಿಗೆಯ ಅಗತ್ಯಗಳಿಗೆ ಅನುಗುಣವಾಗಿ ಪರಿಷ್ಕರಿಸಿದ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ. ಇದು ನಮ್ಮ ಪೇರೆಂಟಲ್ ಕಂಟ್ರೋಲ್ಸ್, 18 ವರ್ಷದೊಳಗಿನವರ ಸುರಕ್ಷತಾ ನೀತಿಗಳು ಮತ್ತು ಸೂಕ್ತ ಬಳಕೆದಾರರಿಗೆ ಸೂಕ್ತ ರಕ್ಷಣೆಯನ್ನು ಅನ್ವಯಿಸಲು ನೆರವಾಗುವ ವಯಸ್ಸಿನ ದೃಢೀಕರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಸುರಕ್ಷತೆಯ ಜವಾಬ್ದಾರಿ ಮುಖ್ಯವಾಗಿ ಯುವಜನರು ಅಥವಾ ಅವರ ಕುಟುಂಬಗಳ ಮೇಲಿರಬಾರದು. ಕಂಪನಿಗಳು ಆರಂಭದಿಂದಲೇ ತಮ್ಮ ಉತ್ಪನ್ನಗಳಲ್ಲಿ ರಕ್ಷಣಾ ಕ್ರಮಗಳನ್ನು ಅಳವಡಿಸುವುದನ್ನು ಮುಂದುವರಿಸಬೇಕು.
ಇದು ನಿರಂತರವಾಗಿ ನಡೆಯುವ ಕೆಲಸವಾಗಿದ್ದು, ಇನ್ನಷ್ಟನ್ನು ಮಾಡಬೇಕಿದೆ. AI ಯ ಪ್ರಯೋಜನಗಳನ್ನು ಪಡೆಯುವ ಅವಕಾಶವನ್ನು ಉಳಿಸಿಕೊಂಡೇ ಯುವಜನರನ್ನು ರಕ್ಷಿಸುವ, ಸಾಕ್ಷ್ಯಾಧಾರಿತವಾದ ಸದೃಢ ಮಾನದಂಡಗಳನ್ನು ರೂಪಿಸಲು ನೆರವಾಗುವ ಅವಕಾಶ ಆಸ್ಟ್ರೇಲಿಯಾಕ್ಕೆ ಇದೆ. ಹದಿಹರೆಯದವರು, ಪೋಷಕರು, ಶಿಕ್ಷಣತಜ್ಞರು, ಸಂಶೋಧಕರು ಮತ್ತು ನೀತಿ ರೂಪಿಸುವವರೊಂದಿಗೆ ಕಲಿಯಲು ನಾವು ಬದ್ಧರಾಗಿದ್ದೇವೆ. ಇದೇ ಗುರಿಗಾಗಿ ಶ್ರಮಿಸುತ್ತಿರುವ ಇತರರ ಸಹಯೋಗವನ್ನೂ ಸ್ವಾಗತಿಸುತ್ತೇವೆ.


