ವೆಬ್ ಅಪ್ಲಿಕೇಶನ್‌ಗಳಿಗಾಗಿ AI ಪೆನೆಟ್ರೇಶನ್ ಪರೀಕ್ಷೆ
ನಿಮ್ಮ ವೆಬ್ ಅಪ್ಲಿಕೇಶನ್‌ಗಳನ್ನು ಪರೀಕ್ಷಿಸಲು, ಭದ್ರತಾ ದೌರ್ಬಲ್ಯಗಳನ್ನು ದೃಢೀಕರಿಸಲು ಮತ್ತು ತಿದ್ದುಪಡಿಗಳು ದೌರ್ಬಲ್ಯದ ದುರ್ಬಳಕೆಯನ್ನು ತಡೆಯುತ್ತವೆಯೇ ಎಂದು ಪರಿಶೀಲಿಸಲು ಸಮನ್ವಯದಿಂದ ಕೆಲಸ ಮಾಡುವ ಏಜೆಂಟ್‌ಗಳ ತಂಡವನ್ನು ಬಳಸಿ.
ಏಜೆಂಟ್‌ಗಳ ತಂಡದೊಂದಿಗೆ ನಿಮ್ಮ ಅಪ್ಲಿಕೇಶನ್‌ಗಳನ್ನು ಪರೀಕ್ಷಿಸಿ
ಏಜೆಂಟ್‌ಗಳು ಮೂಲ ಕೋಡ್ ಮತ್ತು ಆ್ಯಪ್‌ನ ಸಂದರ್ಭವನ್ನು ಬಳಸಿ ದಾಳಿಯ ಮಾರ್ಗಗಳನ್ನು ತನಿಖೆ ಮಾಡುತ್ತವೆ ಹಾಗೂ ಭದ್ರತಾ ದೌರ್ಬಲ್ಯಗಳನ್ನು ದೃಢಪಡಿಸುತ್ತವೆ.


ವರದಿಯಾದ ಭದ್ರತಾ ದೌರ್ಬಲ್ಯಗಳನ್ನು ದೃಢೀಕರಿಸಿ
ಕೋಡ್ ತಪಾಸಣಾ ಸಾಧನಗಳು, ದೋಷ ಪತ್ತೆ ಬಹುಮಾನಕ್ಕಾಗಿ ಸಲ್ಲಿಸಿದ ವರದಿಗಳು ಮತ್ತು ದೌರ್ಬಲ್ಯ ಬಹಿರಂಗಪಡಿಸುವ ವರದಿಗಳಲ್ಲಿ ಗುರುತಿಸಿದ ಸಮಸ್ಯೆಗಳನ್ನು ಪರೀಕ್ಷಿಸಿ. ಯಾವುದನ್ನು ಮೊದಲು ಸರಿಪಡಿಸಬೇಕೆಂದು ನಿರ್ಧರಿಸಲು ಪುರಾವೆಗಳನ್ನು ಬಳಸಿ.
ತಿದ್ದುಪಡಿಗಳು ಪರಿಣಾಮಕಾರಿಯಾಗಿವೆಯೇ ಎಂದು ಪರಿಶೀಲಿಸಿ
ತಿದ್ದುಪಡಿಯು ದೌರ್ಬಲ್ಯದ ದುರ್ಬಳಕೆಯನ್ನು ತಡೆಯುತ್ತದೆಯೇ ಎಂದು ಪರೀಕ್ಷಿಸಿ. ನಿಮ್ಮ ಆ್ಯಪ್‌ಗಳು ಬದಲಾದಂತೆ ಮೌಲ್ಯಮಾಪನವನ್ನು ಪುನರಾವರ್ತಿಸಿ.


ಏಜೆಂಟ್‌ಗಳು ಏನನ್ನು ಪ್ರವೇಶಿಸಬಹುದು ಎಂಬುದನ್ನು ನಿಯಂತ್ರಿಸಿ
ಪ್ರತ್ಯೇಕಿತ ಪರಿಸರಗಳು ಮತ್ತು ಗಾರ್ಡಿಯನ್ ಪರಿಶೀಲನೆಯ ಮೂಲಕ ಮೌಲ್ಯಮಾಪನವು ನಿಗದಿತ ವ್ಯಾಪ್ತಿಯೊಳಗೇ ನಡೆಯುವಂತೆ ನೋಡಿಕೊಳ್ಳಿ. ಏಜೆಂಟ್‌ಗಳು ಯಾವ ಆ್ಯಪ್‌ಗಳು ಮತ್ತು ಅಂತ್ಯಬಿಂದುಗಳನ್ನು ಪ್ರವೇಶಿಸಬಹುದು ಎಂಬುದನ್ನು ನಿಯಂತ್ರಿಸಿ.


