ChatGPTಯ ಜವಾಬ್ದಾರಿಯುತ ಬಳಕೆ
AI ಒಂದು ಪರಿವರ್ತನಾಶೀಲ ಹೊಸ ತಂತ್ರಜ್ಞಾನವಾಗಿದ್ದು, ಜ್ಞಾನಾಧಾರಿತ ಕೆಲಸಗಳಿಗೆ ಹೊಸ ರೂಪ ನೀಡುತ್ತಿದೆ. ChatGPTಗೆ ಆಧಾರವಾಗಿರುವ ಬೃಹತ್ ಭಾಷಾ ಮಾಡೆಲ್ಗಳಿಗೆ (ಎಲ್ಎಲ್ಎಂಗಳು) ಸಾರ್ವಜನಿಕವಾಗಿ ಲಭ್ಯವಿರುವ ಅಪಾರ ಪ್ರಮಾಣದ ಪಠ್ಯ ಮತ್ತು ಇತರ ದತ್ತಾಂಶವನ್ನು ಬಳಸಿ ತರಬೇತಿ ನೀಡಲಾಗಿದೆ. ಇದರಿಂದ ಅವು ಮಾನವರ ಭಾಷೆಯಂತೆಯೇ ಮುಂದಿನ ಪದಗಳನ್ನು ಊಹಿಸಿ ಪಠ್ಯವನ್ನು ರಚಿಸಬಲ್ಲವು. ಇದರಿಂದ ಅವು ಕರಡು ಬರೆಯುವುದು, ಸಾರಾಂಶ ನೀಡುವುದು, ಹೊಸ ಆಲೋಚನೆಗಳನ್ನು ರೂಪಿಸುವುದು ಮತ್ತು ಪ್ರಶ್ನೆಗಳಿಗೆ ಉತ್ತರಿಸುವಂತಹ ಕೆಲಸಗಳಲ್ಲಿ ನೆರವಾಗಬಲ್ಲವು. ಹೀಗೆ ಜನರು ಹೆಚ್ಚು ದಕ್ಷವಾಗಿ ಮತ್ತು ಸೃಜನಶೀಲವಾಗಿ ಕೆಲಸ ಮಾಡಲು ಸಹಾಯ ಮಾಡುತ್ತವೆ.
ಈ ತಂತ್ರಜ್ಞಾನವು ವಿಕಸನಗೊಳ್ಳುತ್ತಲೇ ಇರುವುದರಿಂದ, AI ಅನ್ನು ಜವಾಬ್ದಾರಿಯುತವಾಗಿ ಬಳಸುವುದು ಮುಖ್ಯ. ಈ ಮಾಡೆಲ್ಗಳು ಕೆಲವೊಮ್ಮೆ ತಪ್ಪು ಮಾಹಿತಿಯನ್ನು ನೀಡಬಹುದು. ಅವು ನೀಡುವ ತೀರ್ಮಾನಗಳನ್ನು ಎಚ್ಚರಿಕೆಯಿಂದ ಪರಿಶೀಲಿಸದೆ ಅನ್ವಯಿಸಿದರೆ, ಮಾಡೆಲ್ಗಳ ದುರ್ಬಳಕೆಯಾಗಬಹುದು. ಆರ್ಟಿಫಿಷಿಯಲ್ ಜನರಲ್ ಇಂಟೆಲಿಜೆನ್ಸ್ (AGI) ಇಡೀ ಮಾನವಕುಲಕ್ಕೆ ಪ್ರಯೋಜನವಾಗುವಂತೆ ನೋಡಿಕೊಳ್ಳುವುದು OpenAIಯ ಧ್ಯೇಯವಾಗಿದೆ. ಈ ಗುರಿಯನ್ನು ಸಾಧಿಸಲು ಎಲ್ಲರೂ ಅದನ್ನು ಸುರಕ್ಷಿತವಾಗಿ ಮತ್ತು ವಿವೇಚನೆಯಿಂದ ಬಳಸಬೇಕು. ChatGPT ಬಳಸಲು ಪ್ರಾರಂಭಿಸುವ ಯಾರೇ ಆದರೂ ಸುರಕ್ಷಿತ ಮತ್ತು ಪರಿಣಾಮಕಾರಿ ಬಳಕೆಗೆ ನೆರವಾಗುವ ಉತ್ತಮ ಅಭ್ಯಾಸಗಳನ್ನು ಅನುಸರಿಸಲು ಈ ಪುಟದಲ್ಲಿರುವ ಸಲಹೆಗಳು ಸಹಾಯ ಮಾಡುತ್ತವೆ.
ಕೆಲಸದ ಸ್ಥಳದ ನೀತಿಗಳು ಮತ್ತು OpenAI ನೀತಿಗಳನ್ನು ಪಾಲಿಸಿ. ನಮ್ಮ ಸಾಧನಗಳನ್ನು ಜವಾಬ್ದಾರಿಯುತವಾಗಿ ಬಳಸುವ ಕುರಿತು ಹೆಚ್ಚಿನ ಮಾರ್ಗದರ್ಶನಕ್ಕಾಗಿ OpenAIಯ ಬಳಕೆಯ ನೀತಿಗಳನ್ನು ಪರಿಶೀಲಿಸಿ. ನೀವು ಕೆಲಸದಲ್ಲಿ ChatGPT ಬಳಸುತ್ತಿದ್ದರೆ, ನಿಮ್ಮ ಕಂಪನಿಯ ನಿಯಮಗಳಿಗೆ ಮೊದಲ ಆದ್ಯತೆ ನೀಡಬೇಕು. ಆದ್ದರಿಂದ ಕೆಲಸಕ್ಕಾಗಿ ChatGPT ಬಳಸುವ ಮೊದಲು ಸಂಸ್ಥೆಯ AI ನೀತಿಗಳನ್ನು ಪರಿಶೀಲಿಸಿ.
ಪ್ರಮುಖ ಕೆಲಸಗಳಲ್ಲಿ ಮಾನವರ ಮೇಲ್ವಿಚಾರಣೆ ಇರಲಿ. (ಹೊಸ ಕಿಟಕಿಯಲ್ಲಿ ತೆರೆಯುತ್ತದೆ)ChatGPT ತಪ್ಪು ಮಾಹಿತಿ ನೀಡಬಹುದು(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಅಥವಾ ಅದರ ಮಾಹಿತಿ ಹಳೆಯದಾಗಿರಬಹುದು. ಏಕೆಂದರೆ ಅದು ತರಬೇತಿಗೆ ಬಳಸಿದ ದತ್ತಾಂಶದಲ್ಲಿನ ಮಾದರಿಗಳನ್ನು ಆಧರಿಸಿ ಪ್ರತಿಕ್ರಿಯೆಗಳನ್ನು ರಚಿಸುತ್ತದೆ. ಆ ದತ್ತಾಂಶದಲ್ಲಿ ಇತ್ತೀಚಿನ ಮಾಹಿತಿ ಇಲ್ಲದಿರಬಹುದು ಅಥವಾ ತಪ್ಪುಗಳಿರಬಹುದು. ಮುಖ್ಯ ಸಂಗತಿಗಳನ್ನು ಯಾವಾಗಲೂ ವಿಶ್ವಾಸಾರ್ಹ ಮೂಲಗಳೊಂದಿಗೆ ಮತ್ತೊಮ್ಮೆ ಪರಿಶೀಲಿಸಿ. ತಪ್ಪುಗಳು ಕಂಡುಬಂದರೆ, ಹೆಬ್ಬೆರಳು ಕೆಳಮುಖವಾಗಿರುವ ಗುಂಡಿಯನ್ನು ಬಳಸಿ ಹಿಂಜರಿಕೆಯಿಲ್ಲದೆ ಸೂಚಿಸಿ.
ಪಕ್ಷಪಾತ ಮತ್ತು ದೃಷ್ಟಿಕೋನದ ಬಗ್ಗೆ ಎಚ್ಚರದಿಂದಿರಿ. (ಹೊಸ ಕಿಟಕಿಯಲ್ಲಿ ತೆರೆಯುತ್ತದೆ)ಮಾಡೆಲ್ಗಳು ಪಕ್ಷಪಾತದಿಂದ ಮುಕ್ತವಾಗಿರದೇ ಇರಬಹುದು(ಹೊಸ ಕಿಟಕಿಯಲ್ಲಿ ತೆರೆಯುತ್ತದೆ). ಆದ್ದರಿಂದ ಅವು ನೀಡುವ ಉತ್ತರಗಳನ್ನು ಯಾವಾಗಲೂ ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಅಗತ್ಯವಿದ್ದಾಗ ಅವುಗಳ ತೀರ್ಮಾನಗಳನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿ. ಪಕ್ಷಪಾತವನ್ನು ತಗ್ಗಿಸುವ ಕುರಿತು ನಾವು ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದೇವೆ. ಇದನ್ನು ಸುಧಾರಿಸುವ ಕುರಿತ ಸಲಹೆಗಳನ್ನು ನಾವು ಸ್ವಾಗತಿಸುತ್ತೇವೆ.
ಕಾನೂನು, ವೈದ್ಯಕೀಯ ಅಥವಾ ಹಣಕಾಸು ಸಲಹೆಗಳನ್ನು ತಜ್ಞರಿಂದ ಪರಿಶೀಲಿಸಿಕೊಳ್ಳಿ. ChatGPT ಪರವಾನಗಿ ಪಡೆದ ವೃತ್ತಿಪರ ತಜ್ಞವಲ್ಲ. ಅದು ದತ್ತಾಂಶದಲ್ಲಿನ ಮಾದರಿಗಳನ್ನು ಆಧರಿಸಿ ಪ್ರತಿಕ್ರಿಯೆಗಳನ್ನು ನೀಡುವ ಸಂವಾದಾತ್ಮಕ AI ಆಗಿದ್ದು, ಅರ್ಹ ವೃತ್ತಿಪರರ ಮಾರ್ಗದರ್ಶನಕ್ಕೆ ಪರ್ಯಾಯವಲ್ಲ. ಹೀಗಾಗಿ ChatGPT ನೀಡುವ ಸಲಹೆ ನಿಮ್ಮ ಸನ್ನಿವೇಶಕ್ಕೆ ಯಾವಾಗಲೂ ಸೂಕ್ತವಾಗಿರದೆ ಇರಬಹುದು. ಆರೋಗ್ಯ, ಕಾನೂನು ಅಥವಾ ಹಣಕಾಸಿನಂತಹ ವಿಷಯಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಕಾರ್ಯಪ್ರವೃತ್ತರಾಗುವ ಮೊದಲು ಯಾವಾಗಲೂ ಅರ್ಹ ತಜ್ಞರೊಂದಿಗೆ ಸಮಾಲೋಚಿಸಿ ಅಥವಾ ನಿಮ್ಮ ಸಂಸ್ಥೆಯ ನೀತಿಗಳನ್ನು ಅನುಸರಿಸಿ.
ChatGPT ಬಳಸುವಾಗ ಪಾರದರ್ಶಕವಾಗಿರಿ. ನಿಮ್ಮ ಕೆಲಸದಲ್ಲಿ AI ಬಳಸಿದ್ದನ್ನು ಬಹಿರಂಗಪಡಿಸಬೇಕೆಂದು ನಿಮ್ಮ ಉದ್ಯೋಗದಾತರು ಅಥವಾ ಶಿಕ್ಷಣ ಸಂಸ್ಥೆ ನಿರೀಕ್ಷಿಸಿದರೆ, ChatGPT ಹೇಗೆ ನೆರವಾಗಿದೆ ಎಂಬುದನ್ನು ಇತರರು ತಿಳಿಯಲು ಅನುಕೂಲವಾಗುವಂತೆ ಸಂಭಾಷಣೆಯ ಕೊಂಡಿಗಳನ್ನು(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಅಥವಾ ದಾಖಲೆಗಳನ್ನು ಉಳಿಸಿಕೊಳ್ಳಿ.
ಬೇರೆಯವರ ಧ್ವನಿ ಅಥವಾ ದತ್ತಾಂಶವನ್ನು ಹಂಚಿಕೊಳ್ಳುವ ಮೊದಲು ಅವರ ಸಮ್ಮತಿ ಪಡೆಯಿರಿ. (ಹೊಸ ಕಿಟಕಿಯಲ್ಲಿ ತೆರೆಯುತ್ತದೆ)ರೆಕಾರ್ಡ್ ಮೋಡ್(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) (ನಿಮ್ಮ ವರ್ಕ್ಸ್ಪೇಸ್ ನಿರ್ವಾಹಕರು ಸಕ್ರಿಯಗೊಳಿಸಿದ್ದರೆ) ಮತ್ತು ಅದೇ ರೀತಿಯ ವೈಶಿಷ್ಟ್ಯಗಳು ವೈಯಕ್ತಿಕ ಮಾಹಿತಿಯನ್ನು ದಾಖಲಿಸಬಹುದು. ಯಾವುದೇ ಧ್ವನಿಮುದ್ರಣಕ್ಕೆ ಎಲ್ಲ ಭಾಗವಹಿಸುವವರ ಸಮ್ಮತಿ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ವೈಶಿಷ್ಟ್ಯಗಳನ್ನು ಬಳಸುವಾಗ ನಿಮ್ಮ ಸಂಸ್ಥೆಯ ನೀತಿಗಳನ್ನು ಪಾಲಿಸಿ.
ಪ್ರತಿಕ್ರಿಯೆ ನೀಡಿ ಮತ್ತು ನೀತಿಸಂಬಂಧಿ ಸಮಸ್ಯೆಗಳನ್ನು ವರದಿ ಮಾಡಿ. ಅಸುರಕ್ಷಿತ ಅಥವಾ ತಪ್ಪು ಉತ್ತರಗಳನ್ನು ಸೂಚಿಸಲು ಹೆಬ್ಬೆರಳು ಕೆಳಮುಖವಾಗಿರುವ ಗುಂಡಿಯನ್ನು ಅಥವಾ ವರದಿ ಮಾಡುವ ಪ್ರಕ್ರಿಯೆಯನ್ನು ಬಳಸಿ. ನಿಮ್ಮ ಪ್ರತಿಕ್ರಿಯೆಯು ಎಲ್ಲರ ಸುರಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ).
ಇತ್ತೀಚಿನ ಮಾಹಿತಿಯುಳ್ಳ ಉತ್ತರಗಳಿಗಾಗಿ ಹುಡುಕಾಟ ಅಥವಾ ಡೀಪ್ ರಿಸರ್ಚ್ ಬಳಸಿ. ಇತ್ತೀಚಿನ ಮಾಹಿತಿ ಮುಖ್ಯವಾದಾಗ, ಹುಡುಕಾಟ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಅಥವಾ ಡೀಪ್ ರಿಸರ್ಚ್(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಸಕ್ರಿಯಗೊಳಿಸಿ. ಇದರಿಂದ ChatGPT ಪ್ರಸ್ತುತ ಮೂಲಗಳಿಂದ ಮಾಹಿತಿ ಪಡೆಯಬಹುದು. ಉತ್ತರಗಳನ್ನು ಅವಲಂಬಿಸುವ ಮೊದಲು ಉಲ್ಲೇಖಗಳನ್ನು ಪರಿಶೀಲಿಸಿ, ಕೊಂಡಿಗಳನ್ನು ತೆರೆಯಿರಿ ಮತ್ತು ವಿವರಗಳನ್ನು ದೃಢಪಡಿಸಿಕೊಳ್ಳಿ.


